More

    ನುಡಿದಂತೆ ನಡೆದ ಕಾಂಗ್ರೆಸ್

    ಕೊಳ್ಳೇಗಾಲ: ರಾಜ್ಯದಲ್ಲಿ 1.28 ಕೋಟಿ ಕುಟುಂಬ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕುಟುಂಬ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಗೋಗದಲ್ಲಿ ಪಟ್ಟಣದ ಸಿಡಿಎಸ್ ಭವನದಲ್ಲಿ ಗುರುವಾರ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ನುಡಿದಂತೆ ನಡೆದಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಯಲ್ಲಿ ಈಗಾಗಲೇ 3 ಅನುಷ್ಠಾನಗೊಂಡಿವೆ. ಇದೀಗ 4ನೇ ಗ್ಯಾರಂಟಿಗೆ ಚಾಲನೆ ದೊರೆತಿದೆ. ಉಳಿದ 1 ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.

    ಮಹಿಳೆಯರು ಕುಟುಂಬ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅಂತಹ ಮನೆಯ ಯಜಮಾನಿಕೆ ನಿಭಾಯಿಸುವ ಗೃಹಿಣಿಗೆ ಸರ್ಕಾರ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಪ್ರತಿ ತಿಂಗಳು 2 ಸಾವಿರ ರೂ. ನೀಡಲಿದೆ. ಆ.15ರಿಂದ ಈ ಯೋಜನೆಯ ಫಲವು ಗೃಹಿಣಿಯರಿಗೆ ದೊರೆಯಲಿದ್ದು, ನೊಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

    ನೋಂದಣಿಗಾಗಿ ಜಿಲ್ಲೆಯಲ್ಲಿ 270 ಕೇಂದ್ರ ತೆರೆಯಲಾಗಿದೆ. ಗ್ರಾಮ.1 ಒನ್ ಕೇಂದ್ರಗಳಲ್ಲಿ 115, ಬಾಪೂಜಿ ಸೇವಾ ಕೇಂದ್ರದಲ್ಲಿ 130, ಕರ್ನಾಟಕ ಒನ್‌ನಲ್ಲಿ 7, ಸ್ಥಳೀಯ ಸಂಸ್ಥೆಗಳ 17 ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

    ಉಪವಿಭಾಗಧಿಕಾರಿ ಮಹೇಶ್ ಮಾತನಾಡಿ, ಸರ್ಕಾರದ ಸೌಲಭ್ಯವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು. ಈ ಯೋಜನೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ 2.90 ಲಕ್ಷ ಕುಟಂಬ ಇದರ ಸದುಪಯೋಗ ಪಡೆಯಲಿದೆ ಎಂದರು.

    ತಹಸೀಲ್ದಾರ್ ಮಂಜುಳಾ, ಸಿಡಿಪಿಒ ನಂಜಮ್ಮಣಿ, ನಗರಸಭೆ ಪೌರಾಯುಕ್ತ ರಾಜಣ್ಣ, ನಗರಸಭಾ ಸದಸ್ಯರಾದ ಶಾಂತರಾಜು, ಸುಮಾ ಸುಬ್ಬಣ್ಣ, ಸುರೇಶ್, ಪುಷ್ಪಲತಾ, ರಾಘವೇಂದ್ರ, ಭಾಗ್ಯ, ಎ.ಪಿ.ಶಂಕರ್, ಜಯಮೇರಿ, ಮಾಜಿ ಸದಸ್ಯ ಅಕ್ಮಲ್ ಪಾಷ, ಮುಖಂಡ ಶಾಂತರಾಜು ಮುಡಿಗುಂಡ, ಕವಿತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts