More

    ನೀಲಕಂಠೇಶ್ವರ ಸಂಸ್ಥೆ ಕಾರ್ಯ ಅಮೋಘ

    ಬೈಲಹೊಂಗಲ, ಬೆಳಗಾವಿ: ನಾಡಿನ ವಿದ್ಯಾರ್ಥಿಗಳ ಬಾಳಿಗೆ ದಾರದೀಪವಾಗಿ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಹೇಳಿದರು.

    ಪಟ್ಟಣದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್.ವಿ. ಸಾಧುನವರ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ತರಬೇತುದಾರರ ಘಟಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ನುರಿತ ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಮತ್ತು ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದರು. ಚಿತ್ರನಟ ಶಿವರಂಜನ ಬೋಳಣ್ಣವರ ಮಾತನಾಡಿ, ಕನಸು ನನಸಾಗಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜು ಸಮಯದಿಂದಲೇ ಜ್ಞಾನ ಸಂಪಾದಿಸಬೇಕು ಎಂದರು.

    ಸಂಸ್ಥೆಯ ಪ್ರಾಚಾರ್ಯ ಆರ್.ಎ. ಅರಭಾವಿ ಮಾತನಾಡಿ, ತರಬೇತಿ ಮುಗಿದ ನಂತರ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಶ್ರಮಿಸಬೇಕು ಎಂದರು.
    ಈಶ್ವರ ಹೋಟಿ, ಶಿವರಂಜನ ಬೋಳಣ್ಣವರ, ಮಹಾಂತೇಶ ತುರಮರಿ, ಕಾಲೇಜು ಸಿಬ್ಬಂದಿ ಮತ್ತು ತರಬೇತುದಾರರು ಇದ್ದರು. ಕೆ.ಐ. ಮುಜಾವರ
    ಸ್ವಾಗತಿಸಿದರು. ಕೆ.ಎಸ್. ಹಿರೇಮೇತ್ರಿ ವಾರ್ಷಿಕ ವರದಿ ಓದಿದರು. ಎಸ್.ಡಿ. ಮಡಿವಾಳ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts