More

    ನೀರು ಹಿತಮಿತವಾಗಿ ಬಳಸಿದಲ್ಲಿ ಭವಿಷ್ಯದ ಪೀಳಿಗೆಗೂ ಉಳಿಸಬಹುದು

    ಮುರಗುಂಡಿ: ಅಂತರ್ಜಲವು ಪ್ರಕೃತಿ ನಮಗಾಗಿ ಭೂಗರ್ಭದಲ್ಲಿ ಭದ್ರವಾಗಿ ಕೂಡಿಟ್ಟ ಅಮೂಲ್ಯ ಸಂಪತ್ತು. ನೀರು ಹಿತಮಿತವಾಗಿ ಬಳಸಿದಲ್ಲಿ ಭವಿಷ್ಯದ ಪೀಳಿಗೆಗೂ ಉಳಿಸಬಹುದು ಎಂದು ಜಲಸಂಪನ್ಮೂಲ ತ ಆಕಾಶ ಪಾಟೀಲ ಹೇಳಿದರು.

    ಸ್ಥಳಿಯ ಗ್ರಾಪಂ ಕಾರ್ಯಾಲಯದಲ್ಲಿ ಅಟಲ್​ ಭೂ ಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದ ಸುಸ್ಥಿರ ಅಂತರ್ಜಲ ನಿರ್ವಹಣಾ ಯೋಜನೆ ಕುರಿತಾಗಿ ಈಚೆಗೆ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

    ದೇಶದ ಎಲ್ಲ ರಾಜ್ಯಗಳಲ್ಲಿಯೂ ಪ್ರತಿ ಎರಡು ವರ್ಷಗಳಿಗೊಮ್ಮೆ ಅಂತರ್ಜಲ ಮಟ್ಟದ ಸಮೀೆ ಮಾಡಲಾಗುತ್ತದೆ. ಅಂತರ್ಜಲದ ಅತಿ ಬಳಕೆ, ಕ್ಲಿಷ್ಟಕರ, ಅರೆ ಕ್ಲಿಷ್ಟಕರ ಹಾಗೂ ಸುರತ ಬಳಕೆ ಸೇರಿದಂತೆ ನಾಲ್ಕು ವರ್ಗಗಳಲ್ಲಿ ಮೌಲೀಕರಣ ಮಾಡಲಾಗುತ್ತಿದೆ ಎಂದರು. ಅಟಲ್​ ಭೂ ಜಲ ಯೋಜನೆಯೂ ಕರ್ನಾಟಕದ 14 ಜಿಲ್ಲೆಗಳ 41 ತಾಲೂಕುಗಳ 1,199 ಗ್ರಾಪಂಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದರು.

    ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಎಸ್​.ಪ್ರವಿಣ ಮಾತನಾಡಿ, ಸಮುದಾಯ ಸಹಭಾಗಿತ್ವದ ಸುಸ್ಥಿರ ಅಂತರ್ಜಲ ನಿರ್ವಹಣಾ ಪದ್ಧತಿ ಮೂಲಕ ಅಂತರ್ಜಲ ತೀವ್ರ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಅಂತರ್ಜಲ ಸಂಪನ್ಮೂಲದ ನಿರ್ವಹಣೆಯನ್ನು ಸುಧಾರಿಸುವುದು ಅಟಲ್​ ಭೂ ಜಲ ಯೋಜನೆಯ ಉದ್ದೇಶ ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳ ಒಗ್ಗೂಡಿಸುವಿಕೆಯೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ನೀರಿನ ಬೇಡಿಕೆ ಹಾಗೂ ನೀರಿನ ಮರು ಪೂರೈಕೆಗಾಗಿ ಯೋಜನೆ ರೂಪಿಸಿ ಜಲಭದ್ರತಾ ಯೋಜನೆ ತಯಾರಿಸುವುದು ಕೂಡ ಈ ಯೋಜನೆಯ ಉದ್ದೇಶವಾಗಿದೆ ಎಂದರು.

    ತಾಲೂಕು ಸಂಪನ್ಮೂಲ ಅಧಿಕಾರಿ ಸಂಜಯ ತಳವಾರ, ಗ್ರಾಪಂ ಅಧ್ಯಕ್ಷ ಶೋಭಾ ಪಾಟೀಲ, ಭರಮಾ ಮಗಾಡಿ, ರಮೇಶ ಕುಸನಾಳೆ, ನೀಲವ್ವ ಕರಸಿದ್ಧಗೋಳ, ಅಕ್ಕವ್ವ ಬಾಳಿಗೇರಿ, ಮಾಲಾಶ್ರೀ ನಾಯಿಕ, ತವನಪ್ಪ ಮಹೇಶವಾಡಗಿ, ಕುಮಾರ ಪಾಟೀಲ, ಗಜಾನನ ಹಾವರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts