More

    ನೀರು, ವಿದ್ಯುತ್ ಬಿಲ್ ಮನ್ನಾ ಮಾಡಲು ಒತ್ತಾಯ

    ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಬಹಳಷ್ಟು ಕುಟುಂಬಗಳು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ 3 ತಿಂಗಳ ವಿದ್ಯುತ್ ಹಾಗೂ ನೀರಿನ ಬಿಲ್ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿತು.

    ಕರೊನಾ ಸಂಕಷ್ಟ ಸಮಯದಲ್ಲಿ ವಿದ್ಯುತ್ ದರ ಹೆಚ್ಚಿಸಿ, ಸಾರ್ವಜನಿಕರ ಗಾಯದ ಮೇಲೆ ಸರ್ಕಾರ ಮತ್ತೆ ಬರೆ ಎಳೆದಿದೆ. ಪ್ರತಿ ಯುನಿಟ್‌ಗೆ 30 ಪೈಸೆ ಹೆಚ್ಚು ಮಾಡಿದ್ದು ಸರಿಯಲ್ಲ. ಲಾಕ್‌ಡೌನ್‌ನಿಂದಾಗಿ ಉದ್ಯೋಗ, ವ್ಯಾಪಾರ-ವಹಿವಾಟು ಸಹ ಸ್ಥಗಿತವಾಗಿದೆ. ಇದರಿಂದ ಜೀವನ ನಿರ್ವಹಣೆ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ಬರಬೇಕು. ಅದನ್ನು ಬಿಟ್ಟು ಅಗತ್ಯ ವಸ್ತುಗಳ ಹಾಗೂ ವಿದ್ಯುತ್ ದರವನ್ನೂ ಏರಿಸಿರುವುದರಿಂದ ಬಡ ಕುಟುಂಬಗಳಿಗೆ ತೊಡಕಾಗುತ್ತಿದೆ.

    ಕೂಡಲೇ ಅಗತ್ಯ ಸಾಮಗ್ರಿಗಳ ಬೆಲೆ ಇಳಿಸಬೇಕು. ಅಲ್ಲದೆ, ಪ್ರತಿ ರೈತ ಕುಟುಂಬಕ್ಕೆ ತಲಾ 10 ಸಾವಿರ ರೂ. ನೆರವು ಘೋಷಿಸಬೇಕು. ಕರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ನಾಸೀರ್ ಬಾಗವಾನ್, ಎಂ.ವೈ.ಸೋಮಣ್ಣವರ, ಪ್ರಮೋದ ಪಾಟೀಲ, ಸುರೇಶ ಗಿಡ್ಡನವರ,
    ಜಿಪಂ ಸದಸ್ಯ ಶಂಕರ ಮಾಡಲಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts