More

    ನೀರು ಪೋಲಾಗದಂತೆ ನೋಡಿಕೊಳ್ಳಿ

    ಯಾದಗಿರಿ: ಉತ್ತಮ ಮಳೆಯಾಗುತ್ತಿರುವ ಕಾರಣ ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳು ಭತರ್ಿಯಾಗಿದ್ದು, ರೈತಾಪಿ ವರ್ಗ ನೀರು ವ್ಯರ್ಥವಾಗಿ ಪೋಲಾಗದಂತೆ ಬಳಕೆ ಮಾಡಿಕೊಳ್ಳಿ ಎಂದು ಶಾಸಕ ನಾಗನಗೌಡ ಕಂದಕೂರ ಮನವಿ ಮಾಡಿದರು.

    ಹತ್ತಿಕುಣಿ ಜಲಾಶಯಕ್ಕೆ ಮಂಗಳವಾರ ಬಾಗಿನ ಅಪರ್ಿಸಿದ ಬಳಿಕ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಅವರು, ಭಗವಂತನ ದಯೆದಿಂದ ವರುಣ ಕೃಪೆ ತೋರಿದ್ದಾನೆ. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯ ವ್ಯಾಪ್ತಿಯ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಕೊರತೆ ಕಾರಣ ಕಾಲುವೆಗಳಲ್ಲಿ ಹೂಳು ತುಂಬಿ ಜಮೀನುಗಳಿಗೆ ನೀರು ತಲುಪುತ್ತಿಲ್ಲ ಎಂದು ಕಿಡಿಕಾರಿದರು.

    ಜಲಾಶಯ ವ್ಯಾಪ್ತಿಯ ಮುಖ್ಯ ಕಾಲುವೆ 7ರವರೆಗೆ ಸುಮಾರು 500 ಎಕರೆ ಮುಂಗಾರು ಭತ್ತದ ಬೆಳೆಗೆ ನೀರು ಹರಿಸಲು ಸಾಧ್ಯ ಎಂದು ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಚೇತನ ಕಲಾಸ್ಕರ್ ತಿಳಿಸಿದರು. ಆಗ ರೈತರಾದ ಹಣಮಂತ ಕೋಳಿ, ಭೋಜಣ್ಣಗೌಡ ಯಡ್ಡಳ್ಳಿ, ಸುಭಾಶ್ಚಂದ್ರ ಕಟಕಟಿ ಮಾತನಾಡಿ, ಈ ವರ್ಷ ಜಲಾಶಯ ಬೇಗ ತುಂಬಿದೆ. ಇನ್ನೂ ಮಳೆಗಾಲವಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿದೆ ಎಂದರು.

    ಅಧಿಕಾರಿಗಳು ಜಲಾಶಯ ಭತರ್ಿಯಾದಾಗ ಮಾತ್ರ ಇಲ್ಲಿಗೆ ಭೇಟಿ ನೀಡುತ್ತಾರೆ. ಉಳಿದ ವೇಳೆ ಇತ್ತ ಹಣಕಿಯೂ ಹಾಕಲ್ಲ. ಅತಿವೃಷ್ಟಿಯಿಂದ ಹೆಸರು, ಹತ್ತಿ ಇತರ ಬೆಳೆಗಳು ನಾಶವಾಗಿವೆ. ಮುಖ್ಯ ಕಾಲುವೆ 1ರಿಂದ 10ರವರೆಗೆ ನೀರು ಹರಿಸಿದಾಗ ಮಾತ್ರ ಭತ್ತ ಬೆಳೆಯಲು ಅನುಕೂಲವಾಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

    ಹತ್ತಿಕುಣಿ ನೀರು ಬಳಕೆದಾರ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಪಾಟೀಲ್ ಮಾತನಾಡಿ, ನಮಗೆ ಮುಖ್ಯವಾಗಿ ನೀರು ನಿರ್ವಹಣೆ ಮಾಡುವ ಸಿಬ್ಬಂದಿ ಕೊರತೆ ಇದೆ. ಇಲಾಖೆಯವರು ಕೆಲ ತಿಂಗಳು ಹೊರಗುತ್ತಿಗೆ ಆಧಾರದ ಮೇಲೆ ಐದಾರು ನೌಕರರನ್ನು ನೇಮಕ ಮಾಡಿ ಕೆಲಸ ಮಾಡಿದರೆ ಮಾತ್ರ ಎಲ್ಲ ರೈತರಿಗೆ ನೀರು ತಲುಪಬಹುದು ಎಂದರು.

    ಇದಕ್ಕೆ ಸಹಮತ ವ್ಯಕ್ತಪಡಿಸಿದ ಶಾಸಕ ಕಂದಕೂರ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ನಾನೇ ಆ ಸಿಬ್ಬಂದಿಗೆ ಗೌರವ ಸಂಭಾವನೆ ಕೊಡಲು ಸಿದ್ಧ. ನನಗೆ ರೈತರ ಹಿತ ಕಾಪಾಡುವುದೇ ಮುಖ್ಯವಾಗಿದೆ ಎಂದು ಅಭಯ ನೀಡಿದರು.

    ಸಂಘದ ಅಮೀನರೆಡ್ಡಿ ಬಿಳ್ಹಾರ ಮಾತನಾಡಿ, ಜಲಾಶಯ ಕೊನೆಯ ಭಾಗದ ರೈತರ ಮುಂಗಾರು ಭತ್ತದ ಬೆಳೆಗೆ ಹೇಗಾದರೂ ಮಾಡಿ ನೀರು ಬಿಡಬಹುದು. ಆದರೆ ಹಿಂಗಾರು ಬೆಳೆಯಾಗಿ ಮತ್ತೆ ಭತ್ತ ಬೆಳೆದರೆ ಇತರ ರೈತರಿಗೆ ಶೇಂಗಾ ಮತ್ತಿತರ ಬೆಳೆಗಳಿಗೆ ನೀರಿನ ಅಭಾವ ಕಾಡಲಿದೆ ಎಂದು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಇಂಥ ತಪ್ಪುಗಳನ್ನು ಯಾವ ರೈತರೂ ಮಾಡಬಾರದು. ಇದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತದೆ. ಅಧಿಕಾರಿಗಳು ಮತ್ತು ರೈತರ ಮಧ್ಯೆ ಸಮನ್ವಯ ಇರಬೇಕು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts