More

    ನೀರು ಪಾಲಾದ ನೂರಾರು ಪುಸ್ತಕ

    ಲಕ್ಷ್ಮೇಶ್ವರ: ಮಂಗಳವಾರ ಸುರಿದ ಮಳೆಯಿಂದ ತಾಲೂಕಿನ ಸೂರಣಗಿ ಗ್ರಾಮದ ಗ್ರಂಥಾಲಯಕ್ಕೆ ಕೊಳಚೆ ನೀರು ನುಗ್ಗಿ ಸಾವಿರಾರು ರೂ. ಮೌಲ್ಯದ ನೂರಾರು ಪುಸ್ತಕಗಳು ಹಾಳಾಗಿವೆ.

    ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಂಥಾಲಯದೊಳಗೆ ಮಳೆ ನೀರು ನುಗ್ಗಿದೆ. ತೊಯ್ದ ಪುಸ್ತಕಗಳನ್ನು ಗ್ರಂಥಾಲಯ ಸಹಾಯಕ ನೀಲನಗೌಡ ಪಾಟೀಲ ಅವರು ಬುಧವಾರ ಬೆಳಗ್ಗೆ ಒಣಗಲು ಹಾಕಿದರು. ಮತ್ತೆ ಮಳೆ ಪ್ರಾರಂಭವಾಗಿದ್ದರಿಂದ ರಕ್ಷಿಸಲು ಪರದಾಡಿದರು.

    ಗ್ರಂಥಾಲಯದಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಮಳೆ ನೀರು ಹೊಕ್ಕಿದ್ದರಿಂದ ನೂರಾರು ಪುಸ್ತಕಗಳು ನೆನೆದು ಹೋಗಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಂಥಾಲಯದೊಳಗೆ ಚರಂಡಿ ನೀರು ಸೇರುತ್ತದೆ. ಕಳೆದ ವರ್ಷವೂ ನೀರು ನುಗ್ಗಿ ಸಾಕಷ್ಟು ಪುಸ್ತಕಗಳು ಹಾಳಾಗಿದ್ದವು. ಈ ಕುರಿತು ಗ್ರಾಪಂಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಓದುಗರು, ಗ್ರಂಥಾಲಯ ಸಹಾಯಕ ನೀಲನಗೌಡ ಪಾಟೀಲ ಒತ್ತಾಯಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts