More

    ನೀರು ಕೊಡಿ,ಇಲ್ಲವೇ ಸಾಯಿಸಿ ಬಿಡಿ


    ಯಾದಗಿರಿ: ಮೆಣಸಿನಕಾಯಿ ಬೆಳೆಗೆ ಕಾಲುವೆಯಿಂದ ನೀರು ಹರಿಸಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಧರಣಿ ತಾರಕಕ್ಕೇರುತ್ತಿದೆ.


    ಇಲ್ಲಿಗೆ ಸಮೀಪದ ಭೀಮರಾಯನ ಗುಡಿಯ ಕೆಬಿಜೆಎನ್ನೆಲ್ ಪ್ರಧಾನ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಕಚೇರಿ ಮುಂದೆ ಜೆಸಿಬಿಯಿಂದ ಹಳ್ಳ ತೋಡಿಸಿ, ಒಳಗಡೆ ಕುಳಿತ ಪ್ರಸಂಗ ಜರುಗಿತು. ಕೆಲವರು ಕ್ರಿಮಿನಾಶಕದ ಬಾಟಲ್ ಹಿಡಿದ ಕಾರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿ, ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಯಿತು.

    ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟಿಲ್ ಮಾತನಾಡಿ, ಶಾಂತಿಯುತವಾಗಿ ಕಳೆದ 19 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದರೂ ಸಹ ಸರಕಾರ ನಮ್ಮ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆಯಲ್ಲಿ ಗೆದ್ದು ಬಂದ ನಂತರ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ, ಇದೀಗ ರಾಜಕಾರಣಿಗಳು ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಮಳೆ ಬಂದರೆ ನಾವು ಯಾರು ನೀರು ಕೇಳುತ್ತಿರಲಿಲ್ಲ. ಮಳೆ ಕೊರತೆಯಿಂದಾಗಿ ಜಲಾಶಯದಲ್ಲಿ ನೀರಿದ್ದರೂ ರೈತರಿಗೆ ಕೊಡದೆ ಸತಾಯಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ತಿಳಿಯುತ್ತಿಲ್ಲ. ಮನೆಯೊಡತಿಯ ಮಾಂಗಲ್ಯ ಡವಿಟ್ಟು ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಅದೀಗ ಕೈ ಸೇರುವ ಹೊತ್ತಿನಲ್ಲ ಸರಕಾರ ನೀರು ಕೊಡದೆ ಕಟುಕತನ ಪ್ರದಶರ್ಿಸುತ್ತಿದೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts