More

    ನೀರಿನ ಘಟಕ ನಿಷ್ಪ್ರಯೋಜಕ

    ಹಿರೇಕೆರೂರ: ಪಟ್ಟಣದ ಶ್ರೀ ದುರ್ಗಾದೇವಿ ಸಂತೆ ಮೈದಾನ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವರ್ಷದ ಹಿಂದೆ ಉದ್ಘಾಟನೆಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಹಿಂದುಳಿದ ವರ್ಗದವರು ವಾಸಿಸುತ್ತಿರುವ ಅಂಬೇಡ್ಕರ್ ಕಾಲನಿಯ ಜನತೆಗೆ ಹಾಗೂ ವಾರಕ್ಕೊಮ್ಮೆ ಸಂತೆಗೆ ಆಗಮಿಸುವ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಅನುಕೂಲವಾಗಲಿ ಎಂದು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಲಾಗಿದೆ. ನಿರ್ವಹಣೆಗಾಗಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಪ.ಪಂ. ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಜನರ ಬಳಕೆಗೆ ಸಿಗದಂತಾಗಿದೆ.

    ಲಕ್ಷಾಂತರ ರೂ. ಅನುದಾನದಲ್ಲಿ ನಿರ್ವಿುಸಲಾದ ಘಟಕಕ್ಕೆ ನೀರಿನ ಸಂಪರ್ಕವನ್ನೇ ಜೋಡಿಸಿಲ್ಲ. ಹೀಗಾಗಿ ವರ್ಷದಿಂದ ನಿಷ್ಪ್ರಯೋಜಕವಾಗಿ ಬಿದ್ದಿದೆ. ಸುತ್ತಮುತ್ತ ಗಿಡ- ಗಂಟಿಗಳು ಬೆಳೆದುಕೊಂಡಿವೆ. ಹೀಗೇ ಬಿಟ್ಟರೆ ಘಟಕದ ಸಾಮಗ್ರಿ, ಯಂತ್ರೋಪಕರಣಗಳು ಹಾಳಾಗಲಿವೆ. ನೀರಿನ ಘಟಕವನ್ನು ಕೂಡಲೆ ಜನರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಪಟ್ಟಣದಲ್ಲಿ ವಾರಕ್ಕೊಮ್ಮೆ ದುರ್ಗಾದೇವಿ ಮೈದಾನದಲ್ಲಿ ನಡೆಯುವ ಸಂತೆಗೆ ಸಾವಿರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರು ಬರುತ್ತಾರೆ. ಅವರಿಗೆ ಶುದ್ಧ ನೀರಿನ ಘಟಕ ಅವಶ್ಯವಾಗಿದೆ. ಅಂಬೇಡ್ಕರ್ ನಗರದಲ್ಲಿ ಬಡವರು, ಕೂಲಿಕಾರ್ವಿುಕರು ಮತ್ತು ಹಿಂದುಳಿದ ವರ್ಗದ ಜನತೆ ಹೆಚ್ಚಾಗಿ ವಾಸಿಸುತ್ತಿದ್ದು, ಅವರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ತೆರೆದು ಅನುಕೂಲ ಮಾಡಿಕೊಡಬೇಕು.
    | ಲಿಂಗರಾಜ ನಾಯ್ಕರ್ ಸ್ಥಳೀಯ

    ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆಲ ದಿನಗಳ ಹಿಂದಷ್ಟೇ ನಮ್ಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕೂಡಲೆ ಘಟಕವನ್ನು ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು.
    | ರಾಜಾರಾಮ್ ಪವಾರ್ಪ .ಪಂ. ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts