More

    ನೀರಿನ ಘಟಕದ ಭದ್ರತೆ ಗ್ರಿಲ್ಸ್ ಕಿತ್ತ ಗ್ರಾಪಂ

    ಗೋಕರ್ಣ: ಇಲ್ಲಿನ ರಥಬೀದಿಯಲ್ಲಿ ನಿರ್ವಿುಸಿರುವ ಕುಡಿಯುವ ನೀರಿನ ಘಟಕದ ಹೊರಗೆ ಭದ್ರತೆಗಾಗಿ ಹಾಕಲಾಗಿದ್ದ ಗ್ರಿಲ್ಸ್​ಗಳನ್ನು ಗ್ರಾಂಪಂ ನವರು ಕಿತ್ತಿದ್ದಾರೆ. ಗ್ರಾಪಂನ ಈ ಕ್ರಮಕ್ಕೆ ಘಟಕವನ್ನು ನಿರ್ವಿುಸಿದ್ದ ಯಂಗ್​ಸ್ಟಾರ್ ಕ್ಲಬ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.

    ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ರಥ ಬೀದಿಯಲ್ಲಿರುವ ಗ್ರಾಪಂಗೆ ಸೇರಿದ ಜಾಗದಲ್ಲಿ ಯಂಗ್​ಸ್ಟಾರ್ ಕ್ಲಬ್ ಕಳೆದ ಮಾರ್ಚ್​ನಲ್ಲಿ ಶುದ್ಧ ಕುಡಿವ ನೀರಿನ ಘಟಕವನ್ನು ಸ್ಥಾಪಿಸಿದೆ. ಇದಕ್ಕಾಗಿ ಅಂದಾಜು 8 ಲಕ್ಷ ರೂ. ಖಚಾಗಿದೆ.. ಈ ಘಟಕದ ಮುಂದೆ ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗದ ಹೊಲಸಾಗುತ್ತಿತ್ತು ಇದನ್ನು ತಡೆಯಲು ಕ್ಲಬ್ ಹೊರ ಭಾಗಕ್ಕೆ ಸ್ಟೀಲ್ ಗ್ರಿಲ್ಸ್​ಗಳನ್ನು ಅಳವಡಿಸಿತ್ತು.

    ಗ್ರಿಲ್ಸ್ ಜೋಡಿಸಿದ ಕ್ರಮವನ್ನು ಸ್ಥಳೀಯ ಕೆಲವರು ವಿರೋಧಿಸಿ ತಾಪಂಗೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ತಾಪಂ ಇಒ ಕೂಡಲೆ ಗ್ರಿಲ್ಸ್ ತೆಗೆದು ಹಾಕಿ ಯಥಾ ಸ್ಥಿಯಲ್ಲಿಡಲು ಸೂಚಿಸಿದರು. ಇದನ್ನು ಅನುಸರಿಸಿ ಬುಧವಾರ ಪಂಚಾಯತಿ ಸಿಬ್ಬಂದಿ ಬಂದು ಗ್ರಿಲ್ಸ್​ಗಳನ್ನು ತೆಗೆದು ಪಂಚಾಯತಿಗೆ ಒಯ್ದಿದ್ದಾರೆ.

    ಗೋಕರ್ಣದಲ್ಲಿ ಸೇವೆ ಮಾಡುವವರಿಗೆ ತೊಂದರೆ ನೀಡಲಾಗುತ್ತಿದೆ. ನಾವು ನೀರಿನ ಘಟಕ ಸ್ಥಾಪಿಸುವ ವೇಳೆಯಲ್ಲಿಯೇ ಗ್ರಿಲ್ಸ್ ಅಳವಡಿಸುವುದನ್ನು ಪಂಚಾಯತಿಗೆ ತಿಳಿಸಿ ಮೌಖಿಕ ಒಪ್ಪಿಗೆ ಪಡೆದಿದ್ದೇವೆ. ಪಂಚಾಯತಿಯ ಅವಧಿ ಮುಗಿದ ನಂತರ ತಾಪಂ ಅಧಿಕಾರಿಗಳ ಈ ಕ್ರಮ ಬೇರೆ ಉದ್ದೇಶದಿಂದ ಪ್ರೇರಿತವಾಗಿದೆ.

    | ನಾಗಕುಮಾರ ಗೋಪಿ

    ಅಧ್ಯಕ್ಷ, ಯಂಗ್​ಸ್ಟಾರ್ ಕ್ಲಬ್

    ಕ್ಲಬ್ ಪಂಚಾಯಿತಿಯ ಯಾವುದೇ ಲಿಖಿತ ಪರವಾನಿಗೆ ಇಲ್ಲದೆ ಗ್ರಿಲ್ಸ್ ಕೂಡಿಸಿದೆ. ಇದಕ್ಕೆ ಸ್ಥಳೀಯ ಕೆಲವರು ವಿರೋಧಿಸಿದ್ದಾರೆ. ಇದನ್ನು ತೆಗೆಯಲು ತಾಪಂ ಅಧಿಕಾರಿಗಳು ಸೂಚಿಸಿದ್ದರೂ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಪಂಚಾಯಿತಿ ಇವುಗಳನ್ನು ವಶಕ್ಕೆ ಪಡೆದಿದೆ.

    | ಆರ್.ಜಿ. ಗುನಗಿ

    ಆಡಳಿತಾಧಿಕಾರಿ ಗೋಕರ್ಣ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts