More

    ನೀರಾವರಿ ಯೋಜನೆ ವರ್ಷಾಂತ್ಯಕ್ಕೆ ಪೂರ್ಣ

    ಸಂಬರಗಿ: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಇದೇ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಇದರಲ್ಲಿ ಯಾವುದೇ ಸಂಶಯಬೇಡ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅಥಣಿ ನೀರಾವರಿ ಇಲಾಖೆಯಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪ್ರಗತಿ ಕುರಿತು ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿ ಹಾಗೂ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ವರ್ಷದ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಕರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಯೋಜನೆಗೆ ಹಣ ಬಿಡುಗಡೆಯಾಗಿರಲಿಲ್ಲ.

    ಹೀಗಾಗಿ ಯೋಜನೆಗೆ ಹಿನ್ನಡೆಯಾಗಿದೆ. ಸಿಎಂ ಬೊಮ್ಮಾಯಿ ಯೋಜನೆ ಪೂರ್ಣಗೊಳ್ಳಲು ಬೇಕಾದ ಅನುದಾನ ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದ್ದಲ್ಲದೇ, ಯೋಜನೆಯ ಪ್ರಗತಿಯ ಕುರಿತು ಆಗಾಗ ಮಾಹಿತಿ ನೀಡುವಂತೆ ತಮಗೆ ಸೂಚಿಸಿದ್ದಾಗಿ ತಿಳಿಸಿದರು.

    ನೀರಾವರಿ ಇಲಾಖೆಯ ಅಧಿಕ್ಷಕ ಎಂಜಿನಿಯರ್ ಬಿ.ಆರ್.ರಾಠೋಡ, ಅಧಿಕಾರಿಗಳಾದ ಎಸ್.ಜಿ.ಶ್ರೀನಾಥ, ಕೆ.ರವಿ, ಪ್ರವೀಣ ಹುಣಶಿಕಟ್ಟಿ, ಪ್ರಶಾಂತ ಪೊದ್ದಾರ, ಶಿರೂರ ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಖಿಳೇಗಾಂವ ಗ್ರಾಪಂ ಅಧ್ಯಕ್ಷ ರವಿ ನಾಗೋಳ, ಜಿ.ಪಂ ಮಾಜಿ ಸದಸ್ಯ ದಾದಾ ಶಿಂಧೆ, ಶಿವಾನಂದ ಗೊಲಬಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts