More

    ನಿಸರ್ಗ ಜ್ಞಾನ ಬತ್ತದಿರಲಿ

    ಕುಮಟಾ: ಸುತ್ತಲಿನ ನದಿಕೊಳ್ಳಗಳು ಬತ್ತಿದರೂ ನಮ್ಮೊಳಗಿನ ನಿಸರ್ಗ ಜ್ಞಾನ ಬತ್ತದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಖ್ಯಾತ ಪರಿಸರ ತಜ್ಞ ಶಿವಾನಂದ ಕಳವೆ ಶಿರಸಿ ತಿಳಿಸಿದರು.

    ತಾಲೂಕಿನ ಕಲ್ಲಬ್ಬೆಯಲ್ಲಿ ಸೋಮವಾರ ನಿವೃತ್ತ ಅರಣ್ಯಾಧಿಕಾರಿ ಎಲ್.ಆರ್.ಹೆಗಡೆ ನಿರ್ವಿುಸಿದ ಕುಬ್ಜ ವೃಕ್ಷ ನಿಸರ್ಗಧಾಮದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

    ಪರಿಸರ ಸ್ನೇಹಿ ಉದ್ಯೋಗ ಹೆಚ್ಚುವಲ್ಲಿ ಕುಬ್ಜ ವೃಕ್ಷಗಳ ನಿರ್ವಣವು ಅವಕಾಶಗಳ ಹೆಬ್ಬಾಗಿಲಾಗಿದೆ. ಕುಬ್ಜ ವೃಕ್ಷಗಳು ಪರಿಸರದ ಅಂದ ಹೆಚ್ಚಿಸುವಲ್ಲಿ ಸಹಕಾರಿ. ಇದನ್ನು ತಯಾರಿಸುವ ತರಬೇತಿಗಳು ಹೆಚ್ಚಬೇಕು. ಈ ನಿಟ್ಟಿನಲ್ಲಿ ಕಲ್ಲಬ್ಬೆಯ ಎಲ್.ಆರ್.ಹೆಗಡೆಯವರು ಉತ್ತಮ ಕೆಲಸ ಮಾಡುತ್ತಿದ್ದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

    ನಿಸರ್ಗಧಾಮ ಲೋಕಾರ್ಪಣೆಗೊಳಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಿಗೂ ಪರಿಸರ ಕಾಳಜಿ ಬೇಕು. ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಬೆಳೆಯಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಾಧ್ಯಾಪಕ ಐ.ಪಿ. ಭಟ್, ಜಿಪಂ ಸದಸ್ಯ ಗಜಾನನ ಪೈ ಮಾತನಾಡಿದರು. ಎಸ್.ವಿ.ಹೆಗಡೆ ಭದ್ರನ್, ಡಾ. ಜಿ.ಜಿ. ಹೆಗಡೆ, ಡಾ. ಶ್ರೀಧರ ಭಟ್, ಕೃಷಿ ಸಾಧಕ ಎನ್.ಡಿ. ಹೆಗಡೆ ಇತರರು ಇದ್ದರು.

    ತೇಜಾ ಭಟ್ ಗಣೇಶ ಸ್ತುತಿ ಪ್ರಸ್ತುತಪಡಿಸಿದರು. ಚಿದಾನಂದ ಜಿ. ಹೆಗಡೆ ಸ್ವಾಗತಿಸಿದರು. ರಾಘವೇಂದ್ರ ಹೆಗಡೆ ನಿರ್ವಹಿಸಿದರು. ಎಲ್.ಆರ್. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ತಿಮ್ಮಣ್ಣ ಹೆಗಡೆ ಹೊಳ್ಳೆಮನೆ, ಗಜಾನನ ಭಟ್, ಸುರೇಶ ಭಟ್ ಸಾಣಕಲ್, ಗಜಾನನ ಹೆಗಡೆ ಇತರರು ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts