More

    ನಿಷ್ಕಾಳಜಿ ತೋರಿದರೆ ಅಪಾಯ

    ಮುಂಡರಗಿ: ಮಾಸ್ಕ್ ದಿನಾಚರಣೆ ಹಾಗೂ ಕರೊನಾ ಜಾಗೃತಿ ಜಾಥಾಕ್ಕೆ ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಗುರುವಾರ ಚಾಲನೆ ನೀಡಿದರು.

    ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಬಸವರಾಜ ಕೆ. ಮಾತನಾಡಿ, ಕರೊನಾ ಸೋಂಕಿನ ಬಗ್ಗೆ ಜನರಿಗೆ ಎಷ್ಟೇ ತಿಳಿವಳಿಕೆ ಹೇಳಿದರೂ ಕೆಲವರು ನಿಷ್ಕಾಳಜಿ ತೋರುತ್ತಿದ್ದಾರೆ. ಸೋಂಕು ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯ. ಎಲ್ಲರೂ ಮಾಸ್ಕ್ ಗಳನ್ನು ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಂದಾಗ ಮಾತ್ರ ಕರೊನಾ ರೋಗ ನಿಯಂತ್ರಿಸಲು ಸಾಧ್ಯ ಎಂದರು.

    ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಪ್ರಹ್ಲಾದ ಹೊಸಮನಿ ಮಾತನಾಡಿದರು. ಪುರಸಭೆ ಸದಸ್ಯರಾದ ಜ್ಯೋತಿ ಹಾನಗಲ್ಲ, ಪವನ ಮೇಟಿ, ರಫೀಕ್ ಮುಲ್ಲಾ, ರೆಹಮಾನಸಾಬ್ ಮಲ್ಲಿನಕೇರಿ, ಮಂಜಪ್ಪ ದಂಡಿನ, ಮುಖ್ಯಾಧಿಕಾರಿ ಎಸ್.ಎಚ್.ನಾಯ್ಕರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಬಿ. ಅಳವಂಡಿ, ಉಮೇಶ ದೇವರಮನಿ, ಪುರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

    ಸೋಂಕು ತಡೆಗೆ ಸರ್ಕಾರದ ನಿಯಮ ಪಾಲಿಸಿ

    ಮುಳಗುಂದ: ಕರೊನಾ ಕುರಿತು ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. ಈ ರೋಗ ಪ್ರಪಂಚದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆದಾಗ್ಯೂ ಜನರು ಎಚ್ಚರಿಕೆ ವಹಿಸದಿರುವುದು ದುರದೃಷ್ಟಕರ ಎಂದು ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ ಹೇಳಿದರು.

    ಪಪಂ ಕಾರ್ಯಾಲಯ, ಆರೋಗ್ಯ, ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಮಾಸ್ಕ್ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕರೊನಾ ಬಗೆಗೆ ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಚಿಂತಿಸಬೇಕಿದೆ. ಪರಸ್ಪರ ಅಂತರ ಕಾಪಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುವುದು ಸೇರಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ ಎಂದರು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರೊನಾ ವಿರುದ್ಧದ ಘೊಷಣೆ ಕೂಗುತ್ತ್ತ ಜಾಗೃತಿ ಜಾಥಾ ನಡೆಸಲಾಯಿತು. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಅಶ್ವಿನಿ ಕಬಾಡಿ, ಮುಳಗುಂದ ಪೊಲೀಸ್ ಠಾಣೆಯ ಪಿಎಸ್​ಐ ವಾಸುದೇವ ಹುಲ್ಲೂರ, ಪಪಂ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ, ಪಪಂ ಸದಸ್ಯರಾದ ವಿಜಯ ನೀಲಗುಂದ, ಮಹಾಂತೇಶ ನೀಲಗುಂದ, ನಾಗರಾಜ ದೇಶಪಾಂಡೆ, ಎಸ್.ಸಿ. ಬಡ್ನಿ, ಬಸವರಾಜ ಹಾರೋಗೇರಿ ಜಾಥಾದಲ್ಲಿ ಭಾಗವಹಿಸಿದ್ದರು.

    ಮುಖಗವಸು ಧರಿಸಿ ಮಹಾಮಾರಿ ಓಡಿಸಿ

    ನರಗುಂದ: ಕೋವಿಡ್-19 ನಿಯಂತ್ರಣಕ್ಕಾಗಿ ತಾಲೂಕು ಆಡಳಿತದಿಂದ ಮಾಸ್ಕ್ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಜಾಗೃತಿ ರ್ಯಾಲಿಗೆ ತಹಸೀಲ್ದಾರ್ ಎ.ಎಚ್. ಮಹೇಂದ್ರ ಗುರುವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ‘ವಿಶ್ವದಾದ್ಯಂತ ಕಾಡುತ್ತಿರುವ ಕರೊನಾ ನಿಯಂತ್ರಣಕ್ಕೆ ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳು ಅತ್ಯಂತ ಸಹಕಾರಿ ಯಾಗಿ ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ವೈರಸ್ ನಿಯಂತ್ರಣಕ್ಕಾಗಿ ವಿಧಿಸಿರುವ ಪ್ರತಿಯೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸದೃಢ ಆರೋಗ್ಯ ಹೊಂದಬೇಕು’ ಎಂದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಿಂದ ಪುರಸಭೆಯವರೆಗೆ ಜಾಗೃತಿ ರ‍್ಯಾಲಿ ನಡೆಸಲಾಯಿತು. ಸುನೀಲ ಕುಷ್ಟಗಿ, ಮಾರುತಿ ಅರ್ಭಣದ, ಬಸು ಪಾಟೀಲ, ಎಸ್.ಎಲ್. ಪಾಟೀಲ, ರಾಚನಗೌಡ ಪಾಟೀಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts