More

    ನಿವೇಶನ ಹಂಚಿಕೆ ಕಾರ್ಯ ನಿಲ್ಲಿಸಲ್ಲ

    ಅರಕಲಗೂಡು: ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಎ. ಮಂಜು ರಾಮನಾಥಪುರದಲ್ಲಿ ಬಡವರು, ವಸತಿ ರಹಿತರಿಗೆ ನಿವೇಶನ ಹಂಚುವ ಪುಣ್ಯದ ಕೆಲಸಕ್ಕೆ ತಡೆಯೊಡ್ಡಿ ಪ್ರತಿಭಟಿಸಿದ್ದರು. ಆದರೆ, ಯಾರು ಏನೇ ಕುತಂತ್ರ ನಡೆಸಿದರೂ ನಿವೇಶನ ಹಂಚಿಕೆ ಕಾರ್ಯ ನಿಲ್ಲಿಸುವುದಿಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

    ತಾಲೂಕಿನ ರಾಮನಾಥಪುರದಲ್ಲಿ ಭಾನುವಾರ 95 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಯಂತ್ರಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, 30/40 ಅಳತೆಯ ನಿವೇಶನಗಳನ್ನು ನೀಡಬಹುದು ಎಂದು ಸರ್ಕಾರದ ಅನುಮತಿಯಿದ್ದರೂ 20/30 ಅಳತೆಯ ನಿವೇಶನಗಳನ್ನು ನೀಡಿ ಎಂದು ಎ. ಮಂಜು ಹೇಳಿದ್ದು 20/30 ಅಳತೆಯ ನಿವೇಶನದಲ್ಲಿ ವಾಸಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ 30/40 ಅಳತೆಯ ನಿವೇಶನಗಳನ್ನು ಗ್ರಾಪಂ ಸದಸ್ಯರೇ ಆಯ್ಕೆ ಮಾಡಿದ 50 ಫಲಾನುಭ ವಿಗಳಿಗೆ ನೀಡಲಾಗುವುದು. ರಾಮಸ್ವಾಮಿಯವರು ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ, ಪ್ರಾಮಾಣಿಕ, ಅಭಿವೃದ್ಧಿ ಹರಿಕಾರ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಚುನಾವಣೆಯ ಸಮಯದಲ್ಲಿ ಅದನ್ನು ಮರೆತು ಬಿಡುತ್ತಾರೆ.ನನ್ನದು ರಾಮರಾಜ್ಯ ಪರಿಕಲ್ಪನೆಯಾಗಿದ್ದು ಜನಪ್ರತಿನಿಧಿಯಾದವನು ಸರಳವಾಗಿದ್ದು ಜನತೆ ಉನ್ನತ ಮಟ್ಟದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ನನ್ನ ಆಶಯ ಎಂದರು.

    ಶುದ್ಧ ಕುಡಿಯುವ ನೀರಿನ ಯಂತ್ರಾಗಾರವು ಪ್ರತಿದಿನಕ್ಕೆ 5 ಸಾವಿರ ಜನರಿಗೆ ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿಗೂ 55 ಲೀಟರ್ ಶುದ್ಧ ನೀರು ಒದಗಿಸುತ್ತದೆ. ಗಂಟೆಗೆ 20 ಸಾವಿರ ಲೀಟರ್ ಶುದ್ಧೀಕರಣ ಮಾಡುವ ಸಾಮರ್ಥ್ಯ ಹೊಂದಿದೆ. ಪ್ರವಾಸಿ ತಾಣವಾಗಿರುವ ರಾಮನಾಥಪುರದಲ್ಲಿ ಅಗತ್ಯ ಸೌಲಭ್ಯಗಳು ದೊರೆಯಲಿ ಎಂದು ಈ ಯೋಜನೆಯನ್ನು ಸಾಕಾರಗೊಳಿಸಲಾಗಿದೆ ಎಂದು ಹೇಳಿದರು.

    ಮುಖಂಡರಾದ ಶ್ರೀನಿಧಿ, ದಿವಾಕರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಗೌರಮ್ಮ, ಗ್ರಾಮೀಣ ಕುಡಿಯುವ ನೀರು ಇಲಾಖೆ ಇಂಜಿನಿಯರ್ ನಾಗರಾಜು, ನಿವೃತ್ತ ಇಂಜಿನಿಯರ್ ಅಶ್ವತ್ಥನಾರಾಯಣ, ಪಿಡಿಒ ಕುಮಾರಸ್ವಾಮಿ, ಕಾರ್ಯದರ್ಶಿ ನಿಂಗಣ್ಣ, ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts