More

    ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

    ಅಫಜಲಪುರ: ಭಾರತೀಯ ಸೇನೆಯಲ್ಲಿ 21 ವರ್ಷಗಳ ದೇಶ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧ ಗಿರಿಮಲ್ಲಪ್ಪ ಸಂಗೋಳಗಿ ಅವರನ್ನು ತಾಲೂಕಿನ ಜೇವರ್ಗಿ (ಬಿ) ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ, ಸ್ವಾಗತಿಸುವ ಮೂಲಕ ದೇಶಸೇವೆ ಗೈದಿದಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು.
    ಯುವ ಬಳಗ, ಡಾ.ಶ್ರೀಪತಿ ಪಂಡೀತಾರಾಧ್ಯ ಪಾಂಡಿತ್ಯ ಪುರಸ್ಕಾರ ಪ್ರತಿಷ್ಠಾನ ಹಾಗೂ ಗ್ರಾಮಸ್ಥರು ಯೋಧನಿಗೆ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮಸ್ಥರು, ಮಹಿಳೆಯರು, ಯುವಕರು ಪುಷ್ಪವೃಷ್ಟಿ ಮಾಡುವ ಮೂಲಕ ಧನ್ಯವಾದ ಅಪರ್ಿಸಿದರು. ಮೆರವಣಿಗೆಯಾದ್ಯಂತ ದೇಶಭಕ್ತಿ ಮೂಡಿಸುವ ಘೋಷಣೆಗಳು ಮೊಳಗಿದವು.
    ಮೆರವಣಿಗೆ ನಂತರ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮಠದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯೋಧ ಗಿರಿಮಲ್ಲಪ್ಪ ಅವರನ್ನು ಗ್ರಾಮಸ್ಥರವತಿಯಿಂದ ಸತ್ಕರಿಸಲಾಯಿತು.
    ಸನ್ಮಾನ ಸ್ವೀಕರಿಸಿದ ಯೋಧ ಗಿರಿಮಲ್ಲಪ್ಪ ಅವರು, ಬಿಎಸ್ಎಫ್ ಪಡೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. 2003ರಲ್ಲಿ ಮೂವರು ಉಗ್ರರನ್ನು ಹಿಡಿಯವ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದು, ನನ್ನ ಜೀವನದ ಅವಿಸ್ಮರಣೀಯ ಘಟನೆಯಲ್ಲಿ ಒಂದು ಎಂದು ಸ್ಮರಿಸಿದರು. ಗುಜರಾತ್ನಲ್ಲಿ ನಮ್ಮೂರಿನವರು ನನ್ನ ಕಾರ್ಯ ನೋಡಿದ್ದು, ನನಗೆ ಹೆಮ್ಮೆ ಮೂಡಿಸಿತ್ತು ಎಂದು ಹೇಳಿದರು.
    ಶಾಂತಲಿಂಗೇಶ್ವರ ಮಠದ ಶ್ರೀಜಯಗುರು ಶಾಂತಲಿಂಗಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ, ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ನಾಗಾಸಾಧುಗಳು ನಮ್ಮ ದೇಶವನ್ನು ಕಾಪಾಡಿದ್ದರು. ಪ್ರಸ್ತುತ ಸೈನಿಕರು ಭಾರತವನ್ನು ಕಾಪಾಡುತ್ತಿದ್ದಾರೆ. ನಾವೆಲ್ಲರೂ ಸದಾ ಅವರಿಗೆ ಋಣಿಯಾಗಿರಬೇಕು ಎಂದು ನುಡಿದರು.
    ಪ್ರಮುಖರಾದ ಗುರುಶಾಂತ ಬಿರಾದಾರ, ಗುರುಶಾಂತ ನಾಗೂರ, ಅಮೀತ ಬಿರಾದಾರ, ಅಂಬಾರಾಯ ಪಾಸೋಡಿ, ಮಲ್ಲಿಕಾಜರ್ುನ ಆಳವಾರ, ಗಿರೀಶ ದೇಸಾಯಿ, ಅನೀಲ ಮುನ್ನಳ್ಳಿ, ಶ್ರೀಮಂತ ಆಳವಾರ, ಗುರುಶಾಂತ ಪಾಸೋಡಿ, ಶಿವರುದ್ರ ಜೋಗದೆ, ರಾಜಶೇಖರ ಪಾಸೋಡೆ, ಶರಣಬಸಪ್ಪ ಬಿರಾದಾರ, ಗುರುಶಾಂತ ಸಂಗೋಳಗಿ, ಸೂರ್ಯಕಾಂತ ಬಡಿಗೇಡ, ನಿಜಲಿಂಗಪ್ಪ ನಿಗಡಿ ಇತರರಿದ್ದರು. ಗುರುಶಾಂತ ದೇಸಾಯಿ ಸ್ವಾಗತಿಸಿದರು. ಪ್ರಕಾಶ ಪಾಸೋಡಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts