More

    ನಿವೃತ್ತರಿಗೂ ಹಳೆಯ ಪಿಂಚಣಿ ಕೊಡಿ

    ಕಲಬುರಗಿ: ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ೨೦೦೬ರ ಮಾರ್ಚ್ನಲ್ಲಿ ನೇಮಕಗೊಂಡ ಬಳಿಕ ಅನುದಾನಕ್ಕೊಳಪಟ್ಟು ನಿವೃತ್ತರಾದ ಶಿಕ್ಷಕರಿಗೆ ಹಳೆಯ ಪಿಂಚಣಿ ನೀಡುವಂತೆ ೨೦೦೬ರ ಪೂರ್ವ ನೇಮಕಗೊಂಡ ನಂತರ ಅನುದಾನಕ್ಕೆ ಒಳಪಟ್ಟ ಪಿಂಚಣಿವAಚಿತರ ವೇದಿಕೆ ರಾಜ್ಯ ಗೌರವಾಧ್ಯಕ್ಷ ಡಾ.ಪಿ.ಎಸ್. ಕೊಕಟನೂರ ಆಗ್ರಹಿಸಿದ್ದಾರೆ.
    ಸಾವಿರಾರು ನೌಕರರು ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಯಾವುದೇ ತೆರನಾದ ಪಿಂಚಣಿ ಇಲ್ಲ, ಒಪಿಎಸ್ ಅಥವಾ ಎನ್‌ಪಿಎಸ್ ವ್ಯಾಪ್ತಿಗೆ ಬರದೆ ನಿವೃತ್ತಿ ಜೀವನ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಗೋಳು ತೋಡಿಕೊಂಡರು.
    ಇದೇ ಅವಧಿಯಲ್ಲಿ ನೇಮಕಗೊಂಡು ನಿವೃತ್ತರಾದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ನೀಡಲಾಗುತ್ತಿದೆ. ಅದರಂತೆ ನಮಗೂ ಪಿಂಚಣಿ ನೀಡಬೇಕು. ಈ ಬೇಡಿಕೆ ಮುಂದಿರಿಸಿಕೊAಡು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ೧೪೨ ದಿನ ಹೋರಾಟ ನಡೆಸಿದರೂ ಹಿಂದಿನ ಸರ್ಕಾರ ಸ್ಪಂದಿಲ್ಲ. ಹೊಸ ಸರ್ಕಾರವಾದರೂ ಬೇಡಿಕೆಗೆ ಸ್ಪಂದಿಸಬೇಕೆAದು ಒತ್ತಾಯಿಸಿದರು.
    ಪಿಂಚಣಿಗಾಗಿ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ವಿಭಾಗದ ಏಳು ಜಿಲ್ಲೆಗಳ ಪಿಂಚಣಿವAಚಿತರ ವಿಭಾಗ ಮಟ್ಟದ ಆಪ್ತ ಸಮಾಲೋಚನಾ ಸಭೆ ಭಾನುವಾರ ಬೆಳಗ್ಗೆ ೧೧ಕ್ಕೆ ಕಲಬುರಗಿಯ ಶಹಾಬಾದ್ ರಿಂಗ್ ರೋಡ್‌ನಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಖಾಸಗಿ ಕಾಲೇಜು ಶಿಕ್ಷಕರ ಸದನದಲ್ಲಿ ಕರೆಯಲಾಗಿದೆ. ರಾಜ್ಯಾಧ್ಯಕ್ಷ ಡಾ.ಜಿ.ಆರ್. ಹೆಬ್ಬೂರ ಸಮಗ್ರ ವಿವರ ನೀಡುವರು. ಹೀಗಾಗಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಪಿಂಚಣಿವAಚಿತ ನಿವೃತ್ತ ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ಕೊಕಟನೂರ ಮನವಿ ಮಾಡಿದರು.
    ಪ್ರಮುಖರಾದ ವೀರಣ್ಣಗೌಡ, ಎಸ್.ಬಿ. ಪಾಟೀಲ್, ಡಾ.ಲಗಶೆಟ್ಟಿ ಜಗನ್ನಾಥ, ಬಿ.ಜಿ. ಪಾಟೀಲ್, ಮರೆಪ್ಪ ಬಸವಪಟ್ಟಣ, ಬಕ್ಕಪ್ಪ ಕಳಸಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts