More

    ನಿರಾಶ್ರಿತರಿಗೆ ಅವಶ್ಯಕ ಆಹಾರ ಸಾಮಗ್ರಿ ವಿತರಣೆ

    ಧಾರವಾಡ: ಹುಬ್ಬಳ್ಳಿಯ ದಿ. ವಿ.ಬಿ. ಡಂಗನವರ ಪ್ರತಿಷ್ಠಾನದ ವತಿಯಿಂದ ನಗರದ ಸಪ್ತಾಪುರದಲ್ಲಿನ 70ಕ್ಕೂ ಹೆಚ್ಚು ನಿರಾಶ್ರಿತರಿಗೆ ಬಟ್ಟೆ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಇತರ ಸಾಮಗ್ರಿಗಳನ್ನು ವಿತರಿಸಲಾಯಿತು.

    ಸಾಮಗ್ರಿ ವಿತರಿಸಿದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸದಾನಂದ ಡಂಗನವರ ಅವರು ವಿವಿಧ ರಾಜ್ಯಗಳ ನಿರಾಶ್ರಿತ ಕಾರ್ವಿುಕರಿಗೆ ಬಟ್ಟೆ, ಅವಶ್ಯಕ ವಸ್ತುಗಳನ್ನು ವಿತರಿಸಿ ಮಾದರಿ ಕಾರ್ಯ ಮಾಡಿದ್ದಾರೆ. ಇಂದು ವಿಶ್ವದಾದ್ಯಂತ ಹರಡುತ್ತಿರುವ ಕರೊನಾ ಮಹಾಮಾರಿಗೆ ಜನ ಬಲಿಯಾಗುತ್ತಿದ್ದು, ಎಚ್ಚೆತ್ತುಕೊಳ್ಳುವುದರೊಂದಿಗೆ ಉಳ್ಳವರು ಕೈಲಾದ ಸಹಾಯ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು.

    ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಹುಬ್ಬಳ್ಳಿ- ಧಾರವಾಡ ಹಾಗೂ ಜಿಲ್ಲೆಯ ಇತರ ಕಡೆ ದಿ. ವಿ.ಬಿ. ಡಂಗನವರ ಪ್ರತಿಷ್ಠಾನದ ವತಿಯಿಂದ ಬಡವರು ಹಾಗೂ ನಿರಾಶ್ರಿತ ಕಾರ್ವಿುಕರಿಗೆ ಬಟ್ಟೆ, ಊಟದ ವ್ಯವಸ್ಥೆ, ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದೇವೆ. ಪ್ರತಿಷ್ಠಾನದಿಂದ ಇನ್ನೂ ಹೆಚ್ಚಿನ ಸೇವೆ ಮಾಡಲಾಗುವುದು ಎಂದರು.

    ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಆನಂದ ಜಾಧವ, ಶಾಂತಮ್ಮ ಗುಜ್ಜಳ, ಸುಮಾ ಮಿನಗನವರ, ಎಡ್ವಿನ್ ಫರ್ನಾಂಡಿಸ್, ಮಲಿಕ್ ಸಿಕಂದರ್, ಗಂಗಾಧರ ಚಿಕ್ಕಮಠ, ಗೌರಿಶಂಕರ ವಿದ್ಯಾನಿಲಯದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

    ಕರೊನಾ ವಿರುದ್ಧ ಹೋರಾಟಕ್ಕೆ ಸೇವಾ ಭಾರತಿ

    ಹುಬ್ಬಳ್ಳಿ: ಕರೊನಾ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತದ ಜೊತೆಗೆ ತಾವೂ ಕೈ ಜೋಡಿಸುವುದಾಗಿ ಇಲ್ಲಿನ ಸೇವಾ ಭಾರತಿ ಟ್ರಸ್ಟ್ ಹೇಳಿದೆ. ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಜಿಲ್ಲಾಡಳಿತ ಹಗಲಿರಳಲು ಶ್ರಮಿಸುತ್ತಿದೆ. ವೈದ್ಯರು, ಶುಶ್ರೂಷಕರು, ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ಸೇವೆ ಸ್ತುತ್ಯರ್ಹ. ನಾವೂ ಕೂಡ ಜಿಲ್ಲಾಡಳಿತದೊಂದಿಗೆ ಸೇವೆ ಮಾಡಲು ಸಿದ್ಧ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಟ್ರಸ್ಟ್​ನವರು ಮನವಿಪತ್ರ ಸಲ್ಲಿಸಿದರು.

    ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಡಾ. ರಘು ಅಕಮಂಚಿ, ಪ್ರಧಾನ ಕಾರ್ಯದರ್ಶಿ ಗೋವರ್ಧನರಾವ್, ಆರ್​ಎಸ್​ಎಸ್ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ, ವಿಭಾಗ ಕಾರ್ಯವಾಹ ಕಿರಣ ಗುಡ್ಡದಕೇರಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಸುಧಾಕರ ಶೆಟ್ಟಿ, ರಾಜಶೇಖರ ಪೂಜಾರಿ, ಶಂಕರ ಗುಮಾಸ್ತೆ ಇತರರು ಇದ್ದರು.

    ಸಾಮಾಜಿಕ ಅಂತರ ಕಾಯ್ದುಕೊಂಡ ಜನತೆ

    ಸಂಶಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನ್ಯಾಯ ಬೆಲೆ ಅಂಗಡಿಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಧಾನ್ಯ ಪಡೆದರು.

    ಗ್ರಾಹಕರು ಮಾಸ್ಕ್, ಕರವಸ್ತ್ರಗಳನ್ನು ಮುಖಕ್ಕೆ ಧರಿಸಿ ಒಂದು ಮೀಟರ್ ಅಂತರದಲ್ಲಿ ಹಾಕಲಾಗಿದ್ದ ಬಾಕ್ಸ್​ನಲ್ಲಿ ನಿಂತು ಒಬ್ಬರಾದ ಮೇಲೆ ಒಬ್ಬರು ಅಗತ್ಯ ವಸ್ತುಗಳನ್ನು ಪಡೆದರು. ಉಳಿದಂತೆ ದಿನಸಿ ಅಂಗಡಿಗಳು, ಹಣ್ಣಿನ ಅಂಗಡಿಗಳು, ತರಕಾರಿ ವಾಹನಗಳ ಮುಂದೆ ಸರತಿಯಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡರು. ಆದರೆ, ಗ್ರಾಮದ ಪೇಟೆಯಲ್ಲಿ ಜನರು ವಾಹನಗಳಿಗೆ ಮುಗಿಬಿದ್ದು ತರಕಾರಿ ಖರೀದಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಜನರು ಮತ್ತು ತರಕಾರಿ ವಾಹನಗಳು ಅಲ್ಲಿಂದ ಕಾಲ್ಕಿತ್ತವು.

    ಬಳಿಕ ಸಿಪಿಐ ಬಸವರಾಜ ಕಲ್ಲಮ್ಮನವರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts