More

    ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ


    ಯಾದಗಿರಿ: ವಿದ್ಯಾರ್ಥಿ ಜೀವನ ಸುವರ್ಣಮಯದಂತಿದ್ದರೂ ಪ್ರತಿಕ್ಷಣ ಮುಳ್ಳಿನ ಹಾಸಿಗೆ ಮೇಲೆ ನಡೆದಂತೆ. ಸಮಯ ವ್ಯರ್ಥ ಮಾಡದೆ ನಿರಂತರ ಅಧ್ಯಯನ ಮಾಡಿ ಉತ್ತಮ ನಾಗರಿಕರಾಗಲು ಪ್ರಯತ್ನಿಸಬೇಕು ಎಂದು ಜಿಪಂ ಸಿಇಒ ಗರೀಮಾ ಪನ್ವಾರ ಸಲಹೆ ನೀಡಿದರು.

    ನಗರದ ಸಕ್ಸಸ್ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪುಸ್ತಕಗಳ ಗ್ರಂಥ ಭಂಡಾರ ಲೋಕಾರ್ಪಣೆಗೊಳಿಸಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ದಿನಪತ್ರಿಕೆಗಳು, ಉತ್ತಮ ಗ್ರಂಥಗಳನ್ನು ಓದಬೇಕು. ಪತ್ರಿಕೆಗಳು ಜ್ಞಾನದ ಖಣಜವಾಗಿವೆ. ಅವುಗಳಲ್ಲಿ ಎಲ್ಲ ಮಾಹಿತಿ ಪ್ರಾಪ್ತವಾಗುವುದರ ಜತೆಗೆ ಪರೀಕ್ಷೆಗಳಿಗೆ ಬೇಕಾದ ಅಗತ್ಯ ಮಾಹಿತಿ ದೊರೆಯುತ್ತದೆ ಎಂದರು.

    ಪ್ರತಿ ವಿದ್ಯಾರ್ಥಿ ತಂದೆ-ತಾಯಿಗಳ ಅಶೋತ್ತರಗಳನ್ನು ಈಡೇರಿಸಬೇಕು. ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ನಿಮಗೆ ಪಾಲಕರು ಶಿಕ್ಷಣ ಕೊಡಿಸುತ್ತಿದ್ದಾರೆ. ಅವರ ಕನಸು ನನಸು ಮಾಡಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

    ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಸಮಯ ಪಾಲನೆ, ಶಿಸ್ತುಬದ್ಧತೆ, ದೃಢ ಮನಸ್ಸು ಇವು ಕಲಿಕೆಯಲ್ಲಿ ಅತೀ ಪ್ರಾಮುಖ್ಯತೆ ವಹಿಸುತ್ತವೆ. ನಿರಂತರ ಅಧ್ಯಯನ ಗ್ರಂಥಾಲಯದ ಸದ್ಭಳಕೆ ಮನುಷ್ಯನ ಉನ್ನತ ಸ್ಥಾನಕ್ಕೆ ಕೊಂಡಯ್ಯಲು ಸಾಧ್ಯವಾಗುತ್ತದೆ. ಕಲಾ ವಿದ್ಯಾರ್ಥಿಗಳಿಗೂ ಇಂದು ಸಾಕಷ್ಟು ಶೈಕ್ಷಣಿಕ ಉದ್ಯೋಗ ಅವಕಾಶಗಳಿವೆ ಎಂದರು.

    ಬಾಗಲಕೋಟ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ಒಂಟಿಪೀರ, ಆಯುಷ್ ವೈದ್ಯಾಧಿಕಾರಿ ಡಾ.ಸುನಂದಾ ಕುದರಿ, ಗ್ರಂಥಾಲಯ ಮುಖ್ಯಸ್ಥ ಮಾಳಪ್ಪ ಯಾದವ, ಪ್ರಮುಖರಾದ ಅಶೋಕ ಪುಟಪಾಕ್, ಮಲ್ಲೇಶ ಕುರಕುಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts