More

    ನಿಪ್ಪಾಣಿ ಮುಸ್ಲಿಮರಿಂದ ಸಚಿವೆ ಶಶಿಕಲಾಗೆ ಬೆಂಬಲ

    ನಿಪ್ಪಾಣಿ: ಮುಸ್ಲಿಮರ ಅಭಿವೃದ್ಧಿಗೆ ಸಚಿವೆ ಶಶಿಕಲಾ ಜೊಲ್ಲೆ ಕೊಡುಗೆ ಅಪಾರವಾಗಿದೆ. ಅವರ ಗೆಲುವಿಗೆ ಮುಸ್ಲಿಂ ಸಮುದಾಯ ಬೆಂಬಲ ನೀಡಲಿದೆ ಎಂದು ಮುಸ್ಲಿಂ ಮುಖಂಡ ಇಬ್ರಾಹಿಂ ಮೋಮಿನ್ ತಿಳಿಸಿದರು.

    ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 35 ಲಕ್ಷ ರೂ.ದಲ್ಲಿ ಶಾದಿಮಹಲ್ ನಿರ್ಮಾಣ, 25 ಲಕ್ಷ ರೂ.ದಲ್ಲಿ ಈದ್ಗಾ ಮೈದಾನದ ರಿಪೇರಿ ಹಾಗೂ 20 ಲಕ್ಷ ರೂ.ದಲ್ಲಿ ಗೋಡೆ, 25 ಲಕ್ಷ ರೂ.ದಲ್ಲಿ ಸ್ಮಶಾನ ಭೂಮಿಗೆ ಗೋಡೆ ಹಾಗೂ ಮಳಿಗೆ ನಿರ್ಮಾಣ, ಗ್ರಾಮದೇವತೆ ಬಾವಾಢಂಗವಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ್ದಾರೆ. ನಮ್ಮ ಏಳಿಗೆಗೆ ಶ್ರಮಿಸುತ್ತಿರುವ ಸಚಿವೆ ಜೊಲ್ಲೆ ಅವರು ಹ್ಯಾಟ್ರಿಕ್ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಹಿರಿಯರಾದ ಮುನ್ನಾ ಜಮಾದಾರ್ ಮಾತನಾಡಿದರು. ಮುಸ್ಲಿಂ ಸಮಿತಿ ಅಧ್ಯಕ್ಷ ಪರ್ವೇಜ್ ಅರಾಜ್, ಉಪಾಧ್ಯಕ್ಷ ಬಬನ್ ಮುಜಾವರ್, ಕಾರ್ಯದರ್ಶಿ ಆಯುಬ್ ಮಕಾಂದಾರ್, ಮುನ್ನಾ ಜಮಾದಾರ್, ರೇಹಮಾನ್ ಜಮಾದಾರ್, ರಾಜು ಮಕಾನದಾರ್, ರಿಯಾಜ್ ಮೋಮಿನ್, ಸದ್ದಾಂ ಜಮಾದಾರ್ ಇತರರಿದ್ದರು.

    ಅಕ್ಕೋಳದಲ್ಲಿ ಜೊಲ್ಲೆ ಕ್ಯಾಂಪೇನ್

    ನಿಪ್ಪಾಣಿ: ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭಾನುವಾರ ಮನೆಮನೆಗೆ ತೆರಳಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಎರಡು ಬಾರಿ ಶಾಸಕಿಯಾಗಿ ಅಕ್ಕೋಳ ಗ್ರಾಮದಲ್ಲಿ 63 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮದಲ್ಲಿ ರಸ್ತೆ, ಚರಂಡಿ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಐಟಿಐ ಕಾಲೇಜು, ಅಂಗನವಾಡಿ, ದೇವಸ್ಥಾನಗಳ ಜೀರ್ಣೋದ್ಧಾರ ಹೀಗೆ ಹಲವಾರು ಕಾಮಗಾರಿ ಕೈಗೊಂಡಿದ್ದೇನೆ ಎಂದು ತಿಳಿಸಿದರು.
    ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸದಾವಕಾಶ ನೀಡಿದ್ದೀರಿ. ನಾನು ಕ್ಷೇತ್ರದ ಮತದಾರರು ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದು, ಕಳೆದ 10 ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇನೆ ಎಂದರು.

    ಜನಸಾಮಾನ್ಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಇನ್ನೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

    ಮುಖಂಡರಾದ ರಾವಸಾಹೇಬ ಫರಾಳೆ, ವಿಕಾಸ ಸಂಕಪಾಳ, ಸುಹಾಸ ಗೂಗೆ, ಸಂದೀಪ ಸದಾವರ್ತೆ, ಬಾಪುಸೋ ಕಟ್ಟಿಕಲೆ, ರವಿ ಸದಾವರ್ತೆ, ಸಂಜಯ ಪಿಸಾಳ, ಮಿಲಿಂದ ಕಮತೆ, ಓಂಕಾರ ಬಾರಾಮಲ, ನಿರಂಜನ ಕಮತೆ, ಮನಿಷಾ ರಾಂಗೋಳೆ, ನೇಹಾ ಕಮತೆ, ತೇಜಸ್ವಿನಿ ಪಾಟೀಲ, ಶುಭಾಂಗಿ ಪಿಸಾಳ, ಅನಿತಾ ಗೂಗೆ, ಸಾವಿತ್ರಿ ಜಾಧವ, ಜಿತೇಂದ್ರ ಕುಲಕರ್ಣಿ, ವೈಭವ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts