More

    ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ

    ಬೆಳಗಾವಿ: ಸಂತ ಶಿರೋಮಣಿ ನಾಮದೇವ ಶಿಂಪಿ ಮತ್ತು ಇತರ ವರ್ಗಗಳ ನಿಗಮ ಮಂಡಳಿಗಳ ಸ್ಥಾಪನೆ ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಮದೇವ ಶಿಂಪಿ ಸಮುದಾಯವರು ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ನಾಮದೇವ ಶಿಂಪಿ, ಭಾವಸಾರ ಕ್ಷತ್ರಿಯ, ಸಕುಳ ಸಾಳೆ, ಪಟೇಗಾರ ಮತ್ತು ನೀಲಗಾರ ಉಪ ಜಾತಿಗಳು ರಾಜ್ಯಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಇಲ್ಲಿಯವರೆಗೆ ನಾವು 2ಎ ಮೀಸಲಾತಿಯಲ್ಲಿದ್ದು, ಸರ್ಕಾರದಿಂದ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿಲ್ಲ. ಮೂಲ ಸೌಕರ್ಯಗಳೂ ದೊರಕುತ್ತಿಲ್ಲ ಎಂದು ದೂರಿದರು. ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾಮಾಜಿಕ ನ್ಯಾಯ, ಭದ್ರತೆ ಸಿಕ್ಕಿಲ್ಲ. ನಾವು ನಿಜವಾದ ಅಲ್ಪಸಂಖ್ಯಾತರಾಗಿದ್ದೇವೆ. ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಸವಲತ್ತು ದೊರಕುತ್ತಿಲ್ಲ. ಅಲ್ಲದೆ ನಮ್ಮ ಸಮಾಜದಲ್ಲಿ ಜನರು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಹೊರಬರಲು ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ನಾಮದೇವ ಶಿಂಪಿ ಮತ್ತು ಇತರ ವರ್ಗಗಳ ನಿಗಮ ಮಂಡಳಿ ಸ್ಥಾಪಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು. ಮುಖಂಡರಾದ ಕೇಶವ ಪೇಟಕರ, ಡಾ. ನಯನಾ ಭಸ್ಮೆ , ರತ್ನಾ ಮೊಳೆ, ಅಜಿತ ಕೋಕಣೆ, ಆರ್.ಎಸ್.ಮಾಳೋದೆ, ರಾಜು ಕನೇರಿ, ಮಹಾದೇವ ಖಟಾವಕರ, ರಘುನಾಥ ರೇಣಕೆ, ಸುಧಾಕರ ರೇಣಕೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts