More

    ನಾಲ್ಕು ದಿನ ಕಳೆದರೂ ಸೆರೆ ಸಿಗದ ಚಿರತೆ

    ಬೆಳಗಾವಿ: ಜಾಧವ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಪ್ರವೇಶ ಮಾಡಿರುವ ಚಿರತೆ ಶೋಧ ಕಾರ್ಯಾಚರಣೆ ಸೋಮವಾರವು ಮುಂದುವರಿದಿದೆ. ಆದರೆ, ಚಿರತೆ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆಯು ಗಾಲ್ಫ್ ಕ್ಲಬ್, ಜಾಧವ ನಗರ, ಹನುಮಾನ ನಗರ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 8 ಎಂಟು ಸ್ಥಳಗಳಲ್ಲಿ ಬೋನು ಅಳವಡಿಸಿದ್ದು, ಕಾರ್ಯಾಚರಣೆ ತೀವ್ರಗೊಳಿಸಿದೆ.

    ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿರತೆ ಶೋಧ ಕಾರ್ಯಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಚಿರತೆ ಓಡಾಡುತ್ತಿರುವ ಪ್ರದೇಶಗಳಲ್ಲಿ ಹೆಜ್ಜೆ ಗುರುತುಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚಿರತೆ ಪತ್ತೆಯಾಗಿರುವ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ 12 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಈಗಾಗಲೇ ಪೊದೆಯೊಳಗೆ ಹೋಗಿ ನಾಮಪತ್ತೆಯಾಗಿರುವ ಚಿರತೆ ಪತ್ತೆಯಾಗಿಯೇ ಗದಗದಿಂದ ಪರಿಣತರ ತಂಡ ಕಾರ್ಯನಿರ್ವಹಿಸುತ್ತಿದೆ. ಜನರಿಗೆ ಓಡಾಡದಂತೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಚಿರತೆ ಓಡಾಡುತ್ತಿರುವ ಹೆಜ್ಜೆ ಗುರುತುಗಳು ಸಿಗುತ್ತಿಲ್ಲ. ಇಲ್ಲಿಯವರೆಗೆ ಸಿಸಿ ಟಿವಿ ಕ್ಯಾಮರಾದಲ್ಲಿ ಚಿರತೆ ಓಡಾಟ ಪತ್ತೆಯಾಗಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
    |ರಾಕೇಶ ಅರ್ಜುನವಾಡ ಆರ್‌ಎಫ್‌ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts