More

    ನವರೂಪದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀ

    ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಅಂಗವಾಗಿ ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ ದೇಗುಲದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲು ಭಕ್ತಮಂಡಳಿ ಹಾಗೂ ದೇಗುಲ ಸೇವಾ ಟ್ರಸ್ಟ್ ನಿರ್ಧರಿಸಿದೆ.

    15ರಂದು ಶೈಲಾಪುತ್ರಿ, 16-ಬ್ರಹ್ಮಚಾರಿಣೀ, 17-ಚಂದ್ರಘಂಟಾ, 18-ಕೂಷ್ಮಾಂಡಾ, 19-ಸ್ಕಂದ ಮಾತೆ, 20-ಕಾತ್ಯಾಯನಿ, 21-ಮಾತೆ ಸರಸ್ವತಿ, 22-ಕಾಳಿಮಾತೆ, 23-ಧನಲಕ್ಷ್ಮೀ ಹೀಗೆ… ನವರೂಪದಲ್ಲಿ ಅಲಂಕಾರ ಸೇವೆ ನಡೆಯಲಿದೆ. 24ರಂದು ದೇವಿ ಮೂರ್ತಿಗೆ ಪುಷ್ಪಾಲಂಕಾರ ನೆರವೇರಲಿದೆ. ನಂತರ ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಬನ್ನಿಪೂಜೆ ಜರುಗಲಿದೆ ಎಂದು ದೇಗುಲದ ಟ್ರಸ್ಟ್ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts