More

    ನವನಗರದ ವಾಜಪೇಯಿ ಉದ್ಯಾನ ಅಧ್ವಾನ

    ಹುಬ್ಬಳ್ಳಿ: ಇಲ್ಲಿಯ ನವನಗರ ಹಾಗೂ ಸುತ್ತಲಿನ ಬಡಾವಣೆಗಳಿಗೆ ಇರುವ ಏಕೈಕ ದೊಡ್ಡ ಉದ್ಯಾನವು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ನವನಗರದ ರೋಟರಿ ಶಾಲೆ ಬಳಿಯ ಉದ್ಯಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಉದ್ಯಾನ ಎಂದು ಹೆಸರಿಡಲಾಗಿದೆ. ಆದರೆ, ಇಲ್ಲಿ ಹಸಿರು ಕಂಗೊಳಿಸುತ್ತಿಲ್ಲ. ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಇಲ್ಲ.
    ಉದ್ಯಾನಕ್ಕೆ ಸುತ್ತಲೂ ಕಾಂಪೌಂಡ್ ನಿರ್ವಿುಸಿ ವಾಕಿಂಗ್ ಪಾಥ್ ಮಾಡಿರುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ನವನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳಲ್ಲಿ ಸಾವಿರಾರು ಜನ ವಾಸವಾಗಿದ್ದಾರೆ. ಅವರಿಗೆಲ್ಲ ಒಂದಿಷ್ಟು ಆಹ್ಲಾದಕರ ವಾತಾವರಣದಲ್ಲಿ ಕಾಲ ಕಳೆಯುವ ಭಾಗ್ಯ ಇಲ್ಲವಾಗಿದೆ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಜನರು ಬೇಸರಗೊಂಡಿದ್ದಾರೆ.
    ಇಲ್ಲಿಯ ಕಬ್ಬಿಣದ ಆಟಿಕೆಗಳು ತುಕ್ಕು ಹಿಡಿದಿವೆ. ಗಿಡಗಂಟಿಗಳಿಂದ ತುಂಬಿ ಹೋಗಿರುವ ಉದ್ಯಾನಕ್ಕೆ ಹೊಸ ಕಾಯಕಲ್ಪ ಕಲ್ಪಿಸಬೇಕು. ಮುರಿದು ಹೋಗಿರುವ ಮಕ್ಕಳ ಆಟಿಕೆಗಳನ್ನು ಸರಿಪಡಿಸಬೇಕು, ಇಲ್ಲವೇ ಹೊಸದಾಗಿ ಅಳವಡಿಸಬೇಕು ಎಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ.
    ಉದ್ಯಾನ ನಿರ್ವಹಣೆ ಮಾಡಬೇಕಾದ ಮಹಾನಗರ ಪಾಲಿಕೆ ಕೈಕಟ್ಟಿ ಕುಳಿತಿದೆ. ಹಿರಿಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಉದ್ಯಾನ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು. ಮಕ್ಕಳು, ವೃದ್ಧರು ಒಂದಿಷ್ಟು ಹಾಯಾಗಿ ಕಾಲ ಕಳೆಯುವ ವಾತಾವರಣ ನಿರ್ವಿುಸಬೇಕು ಎಂದು ಸ್ಥಳೀಯರಾದ ಸುನೀಲ್ ಬಿ., ಶ್ರೀಧರ ಆರ್., ಸಚಿನ್ ಇಕ್ಕಲಮಾರ, ರಾಜು ಎಚ್, ಇತರರು ಆಗ್ರಹಿಸಿದ್ದಾರೆ.

    ನವನಗರದ ಉದ್ಯಾನದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಭೂಮಿ ಸಮತಟ್ಟು ಮಾಡಿ ಗಿಡಗಳನ್ನು ಬೆಳೆಸಲಾಗುವುದು. ಮಕ್ಕಳ ಆಟಿಕೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಹಾಗೂ ಇತರ ಕಾಮಗಾರಿಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಶೀಘ್ರ ಟೆಂಡರ್ ಕರೆಯಲಾಗುವುದು.
    ರಾಜೇಂದ್ರ ಚಂಡಕೆ ಎಇಇ, ಗಾರ್ಡನ್ ವಿಭಾಗ, ಎಚ್​ಡಿಎಂಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts