More

    ನವನಗರದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ, ಒಂದು ತಿಂಗಳಿಂದ ಸರಿಯಾಗಿ ಪೂರೈಕೆ ಇಲ್ಲದೇ ಪರದಾಟ

    ಹುಬ್ಬಳ್ಳಿ: ಒಂದು ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನವನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ನವನಗರದ ಕರ್ನಾಟಕ ವೃತ್ತದಿಂದ ಖಾಲಿ ಕೊಡಗಳನ್ನು ಹಿಡಿದು ಮೆರವಣಿಗೆ ನಡೆಸಿದ ಮಹಿಳೆಯರು ಸೇರಿ ನೂರಾರು ಜನರು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

    ನವನಗರ ಸುತ್ತಲಿನ ಗಾಮನಗಟ್ಟಿ, ಅಮರಗೋಳ, ಶಿವಾನಂದನಗರ, ಪಂಚಾಕ್ಷರಿನಗರ, ಪ್ರಜಾನಗರ, ಸುತಗಟ್ಟಿ, ರಾಯಾಪುರ ಭಾಗದ ಜನರು ಪ್ರತಿಭಟನೆಯಲ್ಲಿದ್ದರು.

    ಕಾಂಗ್ರೆಸ್ ಮುಖಂಡ ರಫೀಕ್ ಸಾವಂತನವರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯಾಗಿ ಜನ ಇಷ್ಟು ತೊಂದರೆ ಪಡುತ್ತಿದ್ದರೂ ಈ ಭಾಗದ ಶಾಸಕರು ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ವಲಯ ಕಚೇರಿ ಆಯುಕ್ತ ರಮೇಶ ನೂಲ್ವಿ ಅವರಿಗೆ ಮನವಿ ಸಲ್ಲಿಸಲಾಯಿತು.ಪಾಲಿಕೆ ಮಾಜಿ ಸದಸ್ಯ ಕರಿಯಪ್ಪ ಬೀಸಗಲ್ಲ, ಎಚ್.ಎಂ. ಹಲಗಿ, ಕೆ.ಆರ್. ಮಾಳಗಿ, ಮಂಜುನಾಥ ಕಾಮಕರ, ಅಬ್ದುಲ್ ಸಾವಂತನವರ, ಮಂಜುನಾಥ, ಸಂಕಪ್ಪಾ ಜೋಡಳ್ಳಿ, ಶರೀಫ್ ಧಾರವಾಡ, ಅಸ್ಪಾಕ್ ಭಾಗವಾನ, ಷಣ್ಮುಖ ಬೆಟಗೇರಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts