More

    ನರಗುಂದದಲ್ಲಿ ಮತ್ತೆ ಭೂಕುಸಿತ

    ನರಗುಂದ: ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಅಂತರ್ಜಲ ಪ್ರಮಾಣ ಮತ್ತೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಪಟ್ಟಣದ ಎರಡು ಪ್ರಮುಖ ಬಡಾವಣೆಗಳಲ್ಲಿ ಮತ್ತೆ ಏಕಾಏಕಿ ಭೂಕುಸಿತಗೊಂಡಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

    ಪಟ್ಟಣದ ಸಿದ್ದನಭಾವಿ ಬಡಾವಣೆಯ ಮರಿತಿಮ್ಮಪ್ಪ ತಡಸಿ ಎಂಬುವವರ ಮನೆಯ ಪಡಸಾಲೆ ಹಾಗೂ ಸಿದ್ರಾಮೇಶ್ವರ ನಗರದ ಉಮೇಶ ವಡ್ಡರ ಎಂಬುವವರ ಮನೆಯ ಹಿತ್ತಲು ಜಾಗದಲ್ಲಿ ಬೃಹದಾಕಾರದ ಭೂಕುಸಿತದ ಗುಂಡಿಗಳು ಉಂಟಾಗಿವೆ. ಸಿದ್ರಾಮೇಶ್ವರ ನಗರದಲ್ಲಿ ಬಿದ್ದಿರುವ ಭೂಕುಸಿತದ ಗುಂಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಹೀಗಾಗಿ ಎರಡು ಬಡಾವಣೆಯ ಸಾರ್ವಜನಿಕರು ತೀವ್ರ ಆತಂಕಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಅವಾಂತರ ಸೃಷ್ಟಿಸಿದ ವರುಣ: ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಹುಣಸೀಕಟ್ಟಿ ಗ್ರಾಮದ ಮಲ್ಲಪ್ಪ ಲದ್ದಿ ಎಂಬುವವರ ಮನೆ ಬಿದ್ದಿದೆ. ಮನೆಯ ಮೇಲ್ಛಾವಣಿ ಮತ್ತು ಗೋಡೆಗಳು ಸಂಪೂರ್ಣ ನೆನೆದಿರುವ ಕಾರಣ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಮನೆ ಮುಂದೆ ನಿಲ್ಲಿಸಿದ್ದ ಶಿವಾನಂದ ಪಾಟೀಲ ಎಂಬುವವರ ದ್ವಿಚಕ್ರ ವಾಹನವೊಂದು ಮಣ್ಣಿನ ಅವಶೇಷಗಳಡಿ ಸಿಲುಕಿಕೊಂಡಿದೆ. ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts