More

    ನಗುವಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ

    ಬೀದರ್: ನಗು ಪ್ರತಿಯೊಬ್ಬರ ಆರೋಗ್ಯದ ಕೀಲಿ ಕೈ ಆಗಿದೆ. ಸದಾ ನಗುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂದು ಲಿಂಗಾಯತ ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣ ಹೇಳಿದರು.
    ಇಲ್ಲಿನ ಶರಣ ಉದ್ಯಾನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ ಶರಣ ಸಂಗಮ ಹಾಗೂ ನಗೆ ಹಬ್ಬ ಕಾರ್ಯಕ್ರಮದಲ್ಲಿ ನಗೆಮೊಗದರಸ ಕೂಡಲಸಂಗಮದೇವ ವಿಷಯ ಕುರಿತು ಅನುಭಾವ ನೀಡಿ, ನಗುವಿನಿಂದ ದೀಘರ್ಾಯುಷ್ಯದ ಪ್ರಾಪ್ತಿಯಾಗುತ್ತದೆ. ಎಲ್ಲ ಯೋಗಗಳಲ್ಲಿ ನಗು ಸಹ ಪ್ರಮುಖ ಯೋಗವಾಗಿದೆ.
    ಉದ್ಘಾಟಿಸಿ ಮಾತನಾಡಿದ ಜಾನಪದ ವಿವಿ ಅಧ್ಯಯನ ಕೇಂದ್ರ ಸಂಯೋಜಕ ಡಾ. ಜಗನ್ನಾಥ ಹೆಬ್ಬಾಳೆ, ವಚನ ಹಾಗೂ ಜಾನಪದ ಬೇರೆ ಬೇರೆ ಅಲ್ಲ. ಜಾನಪದಗಳಲ್ಲಿ ಮಣ್ಣಿನ ವಾಸನೆಯ ಜ್ಞಾನವಿದೆ. ಬರುವ ದಿನಗಳಲ್ಲಿ ನಗರದಲ್ಲಿ ಅಂತಾರಾಷ್ಟ್ರಿಯ ಜನಪದ ಉತ್ಸವ ಆಯೋಜಿಸಲು ಯೋಜಿಸಲಾಗಿದೆ ಎಂದು ಹೇಳಿದರು.
    ವಿದ್ಯಾನಗರ ನೀಲಮ್ಮನ ಬಳಗದ ವಿದ್ಯಾವತಿ ಖಪಲೆ ಷಟಸ್ಥಲ ಧ್ವಜಾರೋಹಣಗೈದರು. ಉದ್ಯಮಿ ಗುರುನಾಥ ಕೊಳ್ಳುರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ದೀಪುಕುಮಾರ, ನಿವೃತ್ತ ಅಭಿಯಂತರ ಸಂಗಶೆಟ್ಟಿ ಮಾನಕಾರಿ, ರಾಜಮ್ಮ ಚಿಕ್ಕಪೇಟೆ ಪಾಲ್ಗೊಂಡಿದ್ದರು.
    ಜಾನಪದ ಲೋಕಸಿರಿ ಪ್ರಶಸ್ತಿಗೆ ಭಾಜನರಾದ ಡಾ. ಜಗನ್ನಾಥ ಹೆಬ್ಬಾಳೆ, ರಾಜ್ಯ ಮಟ್ಟದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತ ನವಲಿಂಗ ಪಾಟೀಲ್, ರಾಜ್ಯ ಬೀಜ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿಯಾದ ಶರಣಪ್ಪ ಚಿಮಕೋಡೆ ಅವರನ್ನು ಸನ್ಮಾನಿಸಲಾಯಿತು. ಗಂಗಪ್ಪ ಸಾವ್ಲೆ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲಾ ಮಸೂದೆ ಸ್ವಾಗತಿಸಿದರು. ವಿಜಯಲಕ್ಷ್ಮೀ ಪಾಟೀಲ್ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts