More

    ನಗರ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಿ

    ಯಾದಗಿರಿ: ಬೆಳೆಯುತ್ತಿರುವ ಜಿಲ್ಲಾ ಕೇಂದ್ರದಲ್ಲಿ ಜನರಿಗೆ ಅಗತ್ಯವಿರುವ ಮೂಲಸೌಲಭ್ಯ ಒದಗಿಸಲು ತಾವು ಬದ್ಧರಿರುವುದಾಗಿ ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.

    ನಗರಸಭೆಯ ವಿಶೇಷ ಅನುದಾನದಡಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಗೃಹ ಲೋಕಾರ್ಪಣೆಗೊಳಿಸಿ ಮಾತನಾಡಿ, ನಗರದಲ್ಲಿನ ಜಿಲ್ಲಾಡಳಿತ ಭವನ ಸೇರಿ ಅನೇಕ ಕಚೇರಿಗಳಿಗೆ ನಿತ್ಯ ಸಾವಿರಾರು ಜನ ಗ್ರಾಮೀಣ ಭಾಗದಿಂದ ಬರುತ್ತಾರೆ. ಶೌಚಗೃಹ ಇಲ್ಲದ ಕಾರಣ ಹಲವು ಬಾರಿ ಮುಜುಗರ ಅನುಭವಿಸುವಂತಾಗಿತ್ತು. ಇದನ್ನು ಕಣ್ಣಾರೆ ನಾನೇ ಕಂಡಿದ್ದೇನೆ. ಹೀಗಾಗಿ ಶೌಚಗೃಹ ನಿಮರ್ಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂಬ ನನ್ನ ಸಂಕಲ್ಪ ಈಡೇರುತ್ತಿದೆ ಎಂದರು.
    ಅಕಾರಿಗಳು ನಗರದಲ್ಲಿನ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಬೇಕು. ಶೌಚಗೃಹ ಕೂಡ ಸ್ವಚ್ಛವಾಗಿಟ್ಟುಕೊಳ್ಳಲು ಸಂಬಂಸಿದ ಎಜೆನ್ಸಿಗಳಿಗೆ ತಾಕೀತು ಮಾಡಬೇಕು. ನಗರದ ಪ್ರತಿ ಬಡಾವಣೆಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು ಎಂಬ ಚಿಂತನೆ ಸಕರ್ಾರಕ್ಕಿದೆ. ಹಂತಹಂತವಾಗಿ ಈ ಕಾರ್ಯ ನಡೆಯಲಿದೆ ಎಂದು ಹೇಳಿದರು.
    ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ್, ನಗರಸಭೆ ಸದಸ್ಯ ಹಣಮಂತ ಇಟಗಿ, ನಗರಾಭಿವೃದ್ಧಿ ಪ್ರಾಕಾರದ ಪಿಡಿ ಬಕ್ಕಪ್ಪ ಹೊಸಮನಿ, ಪೌರಾಯುಕ್ತ ಶರಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts