More

    ನಗರದ ಮಹಾರಾಜ ಪಾರ್ಕಿನಲ್ಲಿ ಬೇಸಿಗೆ ಶಿಬಿರ

    ಹಾಸನ: ಹಾಸನ ಜಿಲ್ಲಾ ಕ್ರೀಡಾ ಪರಿಷತ್, ಜಿಲ್ಲಾ ಯೋಗ ಸಂಸ್ಥೆ, ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಜವಳಿ ಗಣಕ, ಇಂಡಿಯನ್ ಕೌನ್ಸಿಲ್ ಫಾರ್ ಸ್ಫೋರ್ಟ್ ಆ್ಯಂಡ್ ಎಜುಕೇಶನ್, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಮಹಾರಾಜ ಪಾರ್ಕಿನಲ್ಲಿ 55 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
    ಈ ಶಿಬಿರವು 20 ದಿನಗಳ ಕಾಲ ನಡೆಯಲಿದ್ದು ಶಿಬಿರದ ಸಮಾರೋಪ ಸಮಾರಂಭವು ಇದೇ ತಿಂಗಳು 28ರಂದು ನಡೆಯಲಿದೆ. ಈಗಾಗಲೇ ಈ ಶಿಬಿರದಲ್ಲಿ ಆರು ವರ್ಷದಿಂದ 15 ವರ್ಷದ ಒಳಗಿನ ಸುಮಾರು 55 ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
    ಮಹಾರಾಜ ಪಾರ್ಕ್‌ನಲ್ಲಿರುವ ಹೆಲ್ತ್ ಜೆಮ್‌ನಲ್ಲಿ ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರಾಟೆ, ಮಲ್ಲಕಂಬ, ಯೋಗಾಸನ, ಲೆಗ್ ಷಟಲ್ ಕಾಕ್ ಕ್ರೀಡೆಗಳ ಬಗ್ಗೆ ವಿಶೇಷ ತರಬೇತಿದಾರದಿಂದ ತರಬೇತಿ ನೀಡಲಾಗುತ್ತಿದೆ. ಮಹದೇವ್, ಪ್ರೀತಂ, ಸಂಜಯ್ ಕುಮಾರ್, ಸಂತೋಷ್ ಅವರ ಮಾರ್ಗದರ್ಶನದಲ್ಲಿ ಈ ತರಬೇತಿ ನಡೆಯುತ್ತಿದ್ದು, ಸಂಜೆ ನಾಲ್ಕು ಗಂಟೆಯಿಂದ ಐದು ಗಂಟೆವರೆಗೆ ಮಕ್ಕಳಿಗೆ ಯೋಗ ತರಬೇತಿಯನ್ನು ಜೆ.ಐ.ನಿರಂಜನ್, ಕುಮುದಾ, ಭಾನುಮತಿ ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts