More

    ನಕಲು ರಹಿತ ಪರೀಕ್ಷೆ ನಡೆಯಲಿ

    ವಿಜಯಪುರ: ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಬದಲಾಗಿದ್ದಾರೆ, ಮುಂದುವರೆದಿದ್ದಾರೆ. ಅವರ ಜತೆಗೆ ಶಿಕ್ಷಕರು ಕೂಡ ವರ್ತಮಾನಕ್ಕೆ ತಕ್ಕಂತೆ ಕಲಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
    ನಗರದ ಲಯೋಲ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಜಯಪುರ , ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಪ್ರಾಚಾರ್ಯರ , ಉಪನ್ಯಾಸಕರ ಮತ್ತು ಬೋಧಕೇತರ ಸಿಬ್ಬಂದಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪರೀಕ್ಷೆಯು ಪಾರದರ್ಶಕವಾಗಿ, ನಕಲು ರಹಿತವಾಗಿ ನಡೆಸಬೇಕು. ಜಿಲ್ಲೆಗೆ ಉತ್ತಮ ಲಿತಾಂಶ ಲಭಿಸಲಿ ಎಂದು ಹಾರೈಸಿದರು.
    ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್.ಪೂಜೇರಿ ಮಾತನಾಡಿ , ಉತ್ತಮ ಲಿತಾಂಶ ನೀಡುವಲ್ಲಿ ಕೇವಲ ಒಬ್ಬರ ಸಹಕಾರದಿಂದ ಆಗುವಂತದಲ್ಲ , ಇಡೀ ಸಮುದಾಯದ ಪಾಲ್ಗೊಳ್ಳುವಿಕೆ ಅವಶ್ಯವಾಗಿದೆ ಎಂದರು.

    ಲೊಯೋಲ ಕಾಲೇಜಿನ ಪ್ರಾಚಾರ್ಯ ಫಾ.ಸ್ಟೀವನ್ ಗೊನ್ಸಾಲ್ವಿಸ್, ಎಸ್.ವೈ.ಅಮಾತೆ, ಉಪನ್ಯಾಸಕರು ಇನ್ನಿತರರು ಪಾಲ್ಗೊಂಡಿದ್ದರು.

    ನಕಲು ರಹಿತ ಪರೀಕ್ಷೆ ನಡೆಯಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts