More

    ನಕಲಿ ಪ್ರಮಾಣ ಪತ್ರ ವಿತರಣೆಗೆ ಆಕ್ರೋಶ

    ಮಂಡ್ಯ: ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರವಾಣ ಪತ್ರ ನೀಡಿರುವುನ್ನು ಖಂಡಿಸಿ ದಲಿತ ಸಂರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.


    ಜಿಲ್ಲಾಧಿಕಾರಿ ಕಚೇರಿ ಬಳಿ ಜವಾಯಿಸಿದ ಪ್ರತಿಭಟನಾಕಾರರು, ಪ.ಜಾತಿ ಮತ್ತು ಪಂಗಡದ ಹೆಸರಿನಲ್ಲಿ ಈಗಾಗಲೇ ರಾಜ್ಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನ ನಕಲಿ ಬೇಡ ಜಂಗಮರ ಜಾತಿ ಪ್ರವಾಣ ಪತ್ರ ಪಡೆದುಕೊಂಡು ಸರ್ಕಾರಿ ನೌಕರಿ ಮತ್ತು ಸೌಲಭ್ಯಗಳನ್ನು ಪಡೆದಿದ್ದಾರೆ. ಅನೇಕ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ವಿವಿಧ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆದಿದ್ದಾರೆ. ಆದ್ದರಿಂದ ಇಂತಹ ಸುಳ್ಳು ಜಾತಿ ಪ್ರವಾಣ ಪತ್ರಗಳ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ವಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂದು ಆಗ್ರಹಿಸಿದರು.


    ಒಂದು ವೇಳೆ ನಕಲಿ ಜಾತಿ ಪ್ರವಾಣ ಪತ್ರ ನೀಡಿದ್ದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾ ವಾಡಬೇಕು. ಅಂತೆಯೇ ಈಗಾಗಲೇ ಸುಳ್ಳು ಜಾತಿ ಪ್ರವಾಣ ಪತ್ರ ಪಡೆದು ಶಿಕ್ಷಣ ಮತ್ತು ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ಪಡೆದಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಸುಳ್ಳು ಜಾತಿ ಪ್ರವಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಪ.ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ-1989 ಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಇದುವರೆಗೂ ದಲಿತ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.


    ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಶಿವರಾಜು ಮರಳಿಗ, ಸಂಟನಾ ಸಂಚಾಲಕ ಶ್ರೀನಿವಾಸ ಮದ್ದೂರು, ಪ್ರಕಾಶ್, ಸುನೀಲ್ ಕುವಾರ್, ತಿಮ್ಮೇಶ್, ಗುರುಲಿಂಗಯ್ಯ, ಶಂಕರ್, ಅಪ್ಪಾಜಿ, ಲೋಕೇಶ್, ಪುಟ್ಟಲಿಂಗಯ್ಯ, ಶಿವ, ಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts