More

    ನಕಲಿ ಪತ್ರಕರ್ತನ ಬಂಧನ

    ಬೆಳಗಾವಿ: ವಾರ ಪತ್ರಿಕೆಯೊಂದರ ಅವಧಿ ಮೀರಿದ ಗುರುತಿನ ಚೀಟಿ ಇಟ್ಟುಕೊಂಡು, ಪತ್ರಕರ್ತ ಎಂದು ಬಿಂಬಿಸಿಕೊಂಡು ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಆಟೋ ನಡೆಸುತ್ತಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹಿಂಡಲಗಾ ಟೀಚರ್ಸ್ ಕಾಲನಿಯ ನಿವಾಸಿ ಉಲ್ಲಾಸ ಬಸವರಾಜ ಅದ್ವಾನಿ (26) ಬಂಧಿತ ವ್ಯಕ್ತಿ. ಪೊಲೀಸರು ಆತನ ಬಳಿಯಿದ್ದ ಅವಧಿ ಮೀರಿದ ಗುರುತಿನ ಚೀಟಿ ಹಾಗೂ ಚಲಾಯಿಸುತ್ತಿದ್ದ ಆಟೋ ಜಪ್ತಿ ಮಾಡಿದ್ದಾರೆ.

    ಬೆಳಗ್ಗೆ 10ರ ವರೆಗೆ ಅಗತ್ಯ ವಸ್ತು ಖರೀದಿ ಹಾಗೂ ದಿನವಿಡೀ ತುರ್ತು ಸೇವೆಗಳಿಗೆ ಅವಕಾಶ ನೀಡಿದ್ದರೂ ಪತ್ರಕರ್ತರ ಗುರುತಿನ ಚೀಟಿ ಬಳಸಿ ಸ್ವಂತ ಲಾಭಕ್ಕೋಸ್ಕರ ಆಟೋ ಚಲಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಎಂದಿನಂತೆ ನಗರದಲ್ಲಿ ಬುಧವಾರ ಪ್ರಯಾಣಿಕರನ್ನು ಕೂರಿಸಿಕೊಂಡು ಆಟೋ ಚಲಾಯಿಸುತ್ತಿರುವಾಗ ರಾಣಿ ಚನ್ನಮ್ಮ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಖಡೇ ಬಜಾರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ನಕಲಿ ಬಂಡವಾಳ ಬಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts