More

    ಧ್ಯಯನಕ್ಕೆ ಪೂರಕವಾಗಿ ತಂತ್ರಜ್ಞಾನ ಬಳಸಿ

    ರಾಮದುರ್ಗ, ಬೆಳಗಾವಿ : ತಂತ್ರಜ್ಞಾನವನ್ನು ಅಧ್ಯಯನಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕು. ಪುಸ್ತಕಗಳು ದೊರೆಯದಿದ್ದಾಗ ತಂತ್ರಜ್ಞಾನದ ಮೊರೆ ಹೋಗಿ ಮಾಹಿತಿ ಪಡೆದು ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದು ಪಿಎಸ್​ಐ ಕಿರಣ ಸತ್ತಿಗೇರಿ ಹೇಳಿದರು. ಪಟ್ಟಣದ ಕೋರ್ಟ್​ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ಕಿಯೋನಿಕ್ಸ್​ ಕಂಪ್ಯೂಟರ್​ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.

    ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯನ್ನು ಅಲ್ಲಗಳೆಯುವಂತಿಲ್ಲ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀೆಗೆ ಪೂರಕವಾದ ಪುಸ್ತಕಗಳನ್ನು ನಿರಂತರವಾಗಿ ಅಧ್ಯಯನ ಮಾಡಿದಾಗ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯ.ಕಂಪ್ಯೂಟರ್​ ಜ್ಯಾನವನ್ನು ಸರ್ಕಾರದ ಉದ್ಯಮವಾದ ಕಿಯೋನಿಕ್ಸ್​ ತರಬೇತಿ ಕೇಂದ್ರದಲ್ಲಿ ಅಧಿಕೃತ ತರಬೇತಿ ನೀಡುತ್ತಿರುವುದು ಶ್ಲಾನೀಯ ಎಂದರು. ಪೊಲೀಸ್​ ವಿಜಯಕುಮಾರ ರಾಠೋಡ ಮಾತನಾಡಿ, ಪರೀಾ ತಯಾರಿ ಮಾಡುವ ಸಂದರ್ಭದಲ್ಲಿ ಪೂರಕ ಪ್ರಶ್ನೆಪತ್ರಿಕೆಗಳ ಸಂಗ್ರಹ, ಅದಕ್ಕೆ ತಕ್ಕಂತೆ ಪುಸ್ತಕಗಳು, ಆನ್​ಲೈನ್​ ತಂತ್ರಜ್ಞಾನದ ಮೂಲಕ ಮಾಹಿತಿ ಸಂಗ್ರಹಿಸಿ, ವ್ಯವಸ್ಥಿತವಾಗಿ ನಿರಂತರ ಪರಿಶ್ರಮದಿಂದ ಓದುದಾಗ ಗುರಿ ತಲುಪಲು ಸಾಧ್ಯವಿದೆ ಎಂದರು. ಕಿಯೋನಿಕ್ಸ್​ ಕಂಪ್ಯೂಟರ್​ ತರಬೇತಿ ಕೇಂದ್ರದ ವ್ಯವಸ್ಥಾಪಕ ಆನಂದ ಲಮಾಣಿ, ಬಸವರಾಜ ಕೋಣನ್ನವರ, ಬಾಬುರೆಡ್ಡಿ ಹೆಬ್ಬಳ್ಳಿ, ನಾಗರಾಜ ಭಜಂತ್ರಿ, ತರಬೇತಿ ಕೇಂದ್ರದ ಮಾರ್ಗದರ್ಶಕರಾದ ಸ್ಪೂರ್ತಿ ಶೆಟ್ಟರ, ಕೀರ್ತಿ ಶೆಟ್ಟರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts