More

    ಧಾರ್ಮಿಕ ಚಟುವಟಿಕೆಯಿಂದ ನೆಮ್ಮದಿ

    ತಲ್ಲೂರ: ಧಾರ್ಮಿಕ ಕಾರ್ಯದಲ್ಲಿ ತೊಡಗಿದರೆ ಮನಃಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಸ್ಥಳೀಯ ತೋರಗಲ್ಲಮಠದ ದೀಪಕ್ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ನೂಲ ಹುಣ್ಣಿಮೆ ಹಾಗೂ ಶ್ರಾವಣ ಮಾಸದ ಅಂಗವಾಗಿ ಗುರುವಾರ ಜರುಗಿದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಯುವ ಪೀಳಿಗೆ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸಬೇಕು ಎಂದರು.

    ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಭಕ್ತರಿಂದ ವೀರಭದ್ರೇಶ್ವರನಿಗೆ ನೂಲು ಅರ್ಪಿಸಿದರು. ಮಧ್ಯಾಹ್ನ ಆನಿಗೋಳ ಪುರವಂತರು ಒಡಪು ಹೇಳಿದರು. ಸುಮಂಗಲೆಯರ ಆರತಿಯೊಂದಿಗೆ ಫಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ವಾದ್ಯಮೇಳದೊಂದಿಗೆ ಹಾದಿ ಬಸವೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ತಲುಪಿತು. ನಂತರ ಮಹಾಪ್ರಸಾದ ಜರುಗಿತು. ವೇದಮೂರ್ತಿ ಬಾಳಯ್ಯ ನಂದಿಮಠ, ಮುಖಂಡ ಮಹಾರುದ್ರಪ್ಪ ಉಪ್ಪಿನ, ಅರ್ಚಕ ಬಸಯ್ಯ ಮಠಪತಿ, ಶಂಕರಗೌಡ ಪಾಟೀಲ, ಮಹಾಂತೇಶ ಮಾಸ್ತಮರಡಿ, ಶಿವಪ್ಪ ಹೂಗಾರ, ವಿನಯ ಕರಿಕಟ್ಟಿ, ಕಾರ್ತಿಕ ಉಪ್ಪಿನ, ಮಲ್ಲಿಕಾರ್ಜುನ ಮಠಪತಿ, ಗುರುರಾಜ ಚವ್ಹನ್ನವರ, ನೀಲಕಂಠ ಹಂಜಿ, ನಿಂಗನಗೌಡ ಪಾಟೀಲ, ಸುದೀಪ ಹೊಸವಾಳ, ರುದ್ರಪ್ಪ ಬನ್ನೂರ, ದರ್ಶನ ಉಪ್ಪಿನ, ಶಿವಪ್ಪ ಯರಗಟ್ಟಿ, ಶಿವಯೋಗಿ ಬಡಿಗೇರ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts