More

    ಧಾರವಾಡ ಜಿಲ್ಲೆಯಲ್ಲಿ ತ್ರಿಶತಕ ದಾಟಿದ ಕರೊನಾ

    ಧಾರವಾಡ: ಜಿಲ್ಲೆಯಲ್ಲಿ ಕರೊನಾ ನಾಗಾಲೋಟ ಮುಂದುವರಿದಿದೆ. ಭಾನುವಾರ 18 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 311ಕ್ಕೆ ಏರಿಕೆಯಾಗಿದೆ. ಇದುವರೆಗೆ 166 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 139 ಇದ್ದು, ಮೃತರ ಸಂಖ್ಯೆ 6ಕ್ಕೆ ಏರಿದೆ.

    ನವಲಗುಂದ ತಾಲೂಕು ಶಿರಕೋಳದ 36 ವರ್ಷದ ಪುರುಷ, ಹಳೇ ಹುಬ್ಬಳ್ಳಿಯ 40 ವರ್ಷ ಪುರುಷ, ಹುಬ್ಬಳ್ಳಿಯ ಬಾರಾನಾ ಪ್ಲಾಟ್, ಮಂಟೂರ ರಸ್ತೆಯ 49 ವರ್ಷದ ಪುರುಷ, ಹುಬ್ಬಳ್ಳಿ ಕೇಶ್ವಾಪುರದ 49 ವರ್ಷದ ಪುರುಷ ಮತ್ತು 47 ವರ್ಷದ ಮಹಿಳೆ, ಹುಬ್ಬಳ್ಳಿ ಕೋಟಿಲಿಂಗ ನಗರದ ವಾಸವಿ ಲೇಔಟ್​ನ 50 ವರ್ಷದ ಪುರುಷ, ಹುಬ್ಬಳ್ಳಿ ರ್ಕಬಸವೇಶ್ವರ ನಗರ 9ನೇ ಕ್ರಾಸ್​ನ 45 ವರ್ಷದ ಮಹಿಳೆ ಹಾಗೂ 34 ವರ್ಷದ ಪುರುಷ, ಹುಬ್ಬಳ್ಳಿ ಅಂಚಟಗೇರಿ ಗಾಣಿಗೇರ ಓಣಿಯ 23, 31, 35 ವರ್ಷದ ವರ್ಷದ ಮಹಿಳೆಯರು, 30 ವರ್ಷದ ಪುರುಷ, 10 ವರ್ಷದ ಬಾಲಕಿ, ಧಾರವಾಡ ಮಿಚಿಗನ್ ಕಾಂಪೌಂಡ್ ಲೋಬೋ ಅಪಾರ್ಟ್​ವೆುಂಟ್​ನ 57 ವರ್ಷ ಮಹಿಳೆ, ಧಾರವಾಡ ಮಾಳಮಡ್ಡಿ ಉಳವಿ ಬಸವೇಶ್ವರ ಹಿಲ್​ನ 50 ವರ್ಷದ ಪುರುಷ, ಧಾರವಾಡ ಹಳಿಯಾಳ ರಸ್ತೆ ಬಸವನಗರ ಭಾಗ 1ರ 24 ವರ್ಷದ ಪುರುಷ, ಹಾವೇರಿ ಜಿಲ್ಲೆಯ ಹಾನಗಲ್ ಮೂಲದ 63 ವರ್ಷದ ಮಹಿಳೆ ಹಾಗೂ ಬಳ್ಳಾರಿ ಮೂಲದ 82 ವರ್ಷದ ವೃದ್ಧನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

    ಮಹಿಳೆ ಸಾವು: ಕರೊನಾ ಸೋಂಕಿತಳಾಗಿದ್ದ ಉಣಕಲ್​ನ 71 ವರ್ಷದ ವೃದ್ಧೆ ಭಾನುವಾರ ಬೆಳಗ್ಗೆ ಕಿಮ್ಸ್​ನಲ್ಲಿ ಮೃತಪಟ್ಟಿದ್ದಾಳೆ. 7 ದಿನಗಳಿಂದ ಒಣ ಕೆಮ್ಮು, ಜ್ವರ, ಸಾಮಾನ್ಯ ನಿಶ್ಶಕ್ತಿಯಿಂದ ಬಳಲುತ್ತಿದ್ದ ವೃದ್ಧೆಯಲ್ಲಿ ಜೂ. 10ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಮಧುಮೇಹ, ಅಧಿಕ ರಕ್ತದೊತ್ತಡ, ಶ್ವಾಸಕೋಶದ ಸೋಂಕು ಮತ್ತಿತರ ಸಮಸ್ಯೆಗಳು ಇದ್ದವು. ವಿದ್ಯಾನಗರ ರುದ್ರಭೂಮಿಯಲ್ಲಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.

    7 ಜನ ಚೇತರಿಕೆ, ಬಿಡುಗಡೆ: ಕೋವಿಡ್​ನಿಂದ ಚೇತರಿಸಿಕೊಂಡಿರುವ 7 ಜನರನ್ನು ಹುಬ್ಬಳ್ಳಿಯ ಕಿಮ್ಸ್​ನಿಂದ ಬಿಡುಗಡೆ ಮಾಡಲಾಗಿದೆ. 56, 30, 54, 51, 43, 48 ವರ್ಷದ ಪುರುಷ ಹಾಗೂ 40 ವರ್ಷದ ಮಹಿಳೆ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಹೆಡ್ ಕಾನ್ಸ್ ಟೇಬಲ್​ಗೂ ಸೋಂಕು: ನಗರದ ಸಂಚಾರ ಠಾಣೆ ಹೆಡ್ ಕಾನ್ಸ್​ಟೇಬಲ್ ಒಬ್ಬರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಅವರು ಕೆಲ ದಿನಗಳ ಹಿಂದೆ ಗೋಕರ್ಣ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಪ್ರವಾಸದಿಂದ ಮರಳಿದ ನಂತರ ಕೋವಿಡ್ ಪರೀಕ್ಷೆಗೆ ಒಳಗಾಗಿ ಕಾರ್ಯನಿರ್ವಹಿಸಿದ್ದಾರೆ. ಭಾನುವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಅವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಠಾಣೆಗೆ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ.

    468 ವರದಿ ಬಾಕಿ: ಜಿಲ್ಲೆಯಲ್ಲಿ ಭಾನುವಾರ ಸಂಜೆವರೆಗೆ 468 ಜನರ ಕೋವಿಡ್ ವರದಿ ಬಾಕಿ ಇವೆ. ವೈರಸ್ ಲಕ್ಷಣಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ವಿದೇಶ, ಹೊರಾಜ್ಯಗಳಿಂದ ಆಗಮಿಸಿರುವವರು ಹಾಗೂ ಅವರ ಸಂಪರ್ಕಕ್ಕೆ ಒಳಗಾದ 25,600 ಜನರ ಮೇಲೆ ನಿಗಾ ಇಟ್ಟಿದೆ. ಕೋವಿಡ್ ಲಕ್ಷಣವುಳ್ಳ ಶಂಕಿತರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಅಂಚೆ ಕಚೇರಿಯಲ್ಲಿ ಭೀತಿ: ಧಾರವಾಡ ನಗರದ ಸ್ಟೇಶನ್ ರಸ್ತೆಯ ಮುಖ್ಯ ಅಂಚೆ ಕಚೇರಿಗೆ ಕರೊನಾ ಭೀತಿ ಎದುರಾಗಿದೆ. 2-3 ದಿನಗಳ ಹಿಂದೆ ಕರೊನಾ ಶಂಕಿತ ವ್ಯಕ್ತಿಯೊಬ್ಬ ಅಂಚೆ ಕಚೇರಿಗೆ ಭೇಟಿ ನೀಡಿದ್ದ ಎಂಬುದು ಬೆಳಕಿಗೆ ಬಂದಿದೆ.

    ಕರೊನಾ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಅಂಚೆ ಕಚೇರಿ ಆವರಣದಲ್ಲಿ ಭಾನುವಾರ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಕೋವಿಡ್ ಶಂಕಿತ ವ್ಯಕ್ತಿ ಇಲ್ಲಿ ಭೇಟಿ ನೀಡಿದ್ದಾನೆ ಎಂದು ಕಚೇರಿಯ ಮುಖ್ಯ ಗೇಟ್​ಗೆ ಸೂಚನಾಪತ್ರ ಅಂಟಿಸಿ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ, ಸೋಮವಾರ ಅಂಚೆ ಕಚೇರಿ ತೆರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

    ಕಾಡನಕೊಪ್ಪ ಜನತಾ ಪ್ಲಾಟ್ ಸೀಲ್​ಡೌನ್: ಕಲಘಟಗಿ ತಾಲೂಕಿನಲ್ಲಿ 10ನೇ ಕರೊನಾ ಪಾಸಿಟಿವ್ ಪ್ರಕರಣ ಪಿ-11393 ಕಾಡನಕೊಪ್ಪ ಗ್ರಾಮದಲ್ಲಿ ಪತ್ತೆಯಾಗಿದ್ದು, ಗ್ರಾಮದ ಜನತಾ ಪ್ಲಾಟ್ ಬೀದಿಯನ್ನು ಸೀಲ್​ಡೌನ್ ಮಾಡಲಾಗಿದೆ. ಶನಿವಾರ ಗ್ರಾಮದ ಪಿ-11393 ಎಂಬ 43 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತಾಲೂಕು ಆಡಳಿತವು ಗ್ರಾಮ ಪಂಚಾಯಿತಿ ಸಿಬ್ಬಂದಿ ಜೊತೆ ತೆರಳಿ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್​ಡೌನ್ ಮಾಡಿದೆ. ಸೋಂಕಿತ ವ್ಯಕ್ತಿಯ ಮನೆ ಸುತ್ತಲಿನ ಬೀದಿಯನ್ನು ಬಂದ್ ಮಾಡಲಾಗಿದೆ. ಸೋಂಕಿತ ಕುಟುಂಬದ ಸದಸ್ಯರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಅಕ್ಕ ಪಕ್ಕದವರನ್ನು ಬೀದಿಯಿಂದ ಹೊರಗಡೆ ಬಾರದಂತೆ ಸೂಚನೆ ನೀಡಲಾಗಿದೆ. ಸೋಂಕಿತ ವ್ಯಕ್ತಿಯು ಪಕ್ಕದ ಅಂಚಟಗೇರಿ ಗ್ರಾಮದಲ್ಲಿನ ಸೋಂಕಿತನೊಂದಿಗೆ ಹೈದರಾಬಾದ್​ಗೆ ತೆರಳಿದ್ದನ್ನು ಎನ್ನಲಾಗಿದೆ. ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಮುಂದಾಗಿದ್ದ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts