More

    ಧರಣಿ ಕೈಬಿಟ್ಟ ಭದ್ರತಾ ಸಿಬ್ಬಂದಿ

    ಮುಂಡರಗಿ: ತಾಲೂಕಿನ ಕಪ್ಪತಗುಡ್ಡದ ಸುಜಲಾನ್ ಕಂಪನಿಯ ಪವನ ವಿದ್ಯುತ್ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯ 10 ತಿಂಗಳ ಬಾಕಿ ವೇತನ ನೀಡಬೇಕು ಹಾಗೂ ಸಿಬ್ಬಂದಿಯನ್ನು ಕೆಲಸದಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಿ 29ದಿನಗಳಿಂದ ಭದ್ರತಾ ಸಿಬ್ಬಂದಿ ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಮಂಗಳವಾರ ಅಂತ್ಯಗೊಂಡಿತು.

    ಪ್ರತಿಭಟನಾನಿರತರನ್ನು ಮಂಗಳವಾರ ಭೇಟಿಯಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಭದ್ರತಾ ಸಿಬ್ಬಂದಿ ಸಮಸ್ಯೆ ಕುರಿತು ರ್ಚಚಿಸಲು ಜಿಲ್ಲಾಡಳಿತ ವತಿಯಿಂದ ಫೆ.24ರಂದು ಸಭೆ ಏರ್ಪಡಿಸಲಾಗಿತ್ತು. ಬಾಕಿ ವೇತನ ಕುರಿತಂತೆ ಸಂದಾನದ ರೂಪದಲ್ಲಿ ಪ್ರತಿಯೊಬ್ಬರಿಗೆ 1ಲಕ್ಷ ರೂ. ನೀಡುವುದರ ಜತೆಗೆ ಕೆಲಸವನ್ನು ಬೆಂಗಳೂರ ಭಾಗದಲ್ಲಿ ಕೊಡಲಾಗುತ್ತದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಸಣ್ಣ ಸಂಬಳಕ್ಕೆ ಅಲ್ಲಿಗೆ ಹೋಗಲು ಆಗುವುದಿಲ್ಲ. ಅಲ್ಲಿ ಕೆಲಸ ಬೇಡ ಸಂದಾನದ ಹಣವನ್ನು ಹೆಚ್ಚು ಮಾಡಿ ಎಂದು ಕಾರ್ವಿುಕರು ಮನವಿ ಮಾಡಿದ್ದರು ಎಂದು ತಿಳಿಸಿದರು.

    ಈಗಾಗಲೇ ಕಾರ್ವಿುಕ ಇಲಾಖೆ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವ ಕುರಿತು ಕಂಪನಿಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ಕನಿಷ್ಠ ವೇತನ ಪ್ರಕಾರ ಪ್ರತಿ ಭದ್ರತಾ ಸಿಬ್ಬಂದಿಗೆ ಸಂದಾನ ರೂಪದಲ್ಲಿ 3.46 ಲಕ್ಷ ರೂ.ನೀಡಲು ಕಂಪನಿ ಅಧಿಕಾರಿಗಳು ಒಪ್ಪಿಗೆ ನೀಡಿದರು. ಮಾರ್ಚ್ 2 ರಂದು ಕಂಪನಿ ಜನರಲ್ ಮ್ಯಾನೇಜರ್ ಬಂದು ಒಪ್ಪಂದದ ನಿರ್ದೇಶನದ ಪ್ರಕಾರ ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ. ನಿಮ್ಮ ಹೋರಾಟಕ್ಕೆ ಕಂಪನಿ ಸ್ಪಂದಿಸಲಿದ್ದು ನಾವು ನಿಮಗೆ ನ್ಯಾಯ ದೊರಕಿಸಿಕೊಡುತ್ತೇವೆ. ಆದ್ದರಿಂದ ಧರಣಿ ಕೈಬಿಡಬೇಕು ಎಂದು ತಿಳಿಸಿದರು.

    ಧರಣಿ ನೇತೃತ್ವ ವಹಿಸಿದ್ದ ರವಿಕಾಂತ ಅಂಗಡಿ ಮಾತನಾಡಿ, ಸುಜಲಾನ್ ಕಂಪನಿಯ 130 ಭದ್ರತಾ ಸಿಬ್ಬಂದಿಯ ನಿರಂತರ ಧರಣಿಗೆ ಜಿಲ್ಲಾಧಿಕಾರಿ ಸ್ಪಂದಿಸಿದ್ದಾರೆ. ಕಂಪನಿಯವರೊಂದಿಗೆ ರ್ಚಚಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದು ಕಾರ್ವಿುಕರಿಗೆ ನ್ಯಾಯ ದೊರಕಿದೆ ಎಂದರು. ನಂತರ ಧರಣಿ ಕೈಬಿಟ್ಟರು.

    ಜಿಲ್ಲಾ ಕಾರ್ವಿುಕ ಅಧಿಕಾರಿ ಸುಧಾ ಗರಗ, ತಹಸೀಲ್ದಾರ್ ಡಾ.ವೆಂಕಟೇಶ ನಾಯಕ, ಎನ್.ಟಿ.ಪೂಜಾರ, ಎಸ್.ಕೆ. ನದಾಫ್, ನೂರ್ ಅಹ್ಮದ್ ಮಕಾಂದಾರ, ಯಲ್ಲಪ್ಪ ಹೊಂಬಳಗಟ್ಟಿ, ಶ್ರೀನಿವಾಸ ಕೊರ್ಲಗಟ್ಟಿ, ಶಿವಾನಂದ ಇಟಗಿ, ಹಾಲಪ್ಪ ಅರಹುಣಸಿ, ದುರಗಪ್ಪ ಮೋರನಾಳ, ಮಹೆಬೂಬಸಾಬ್ ಬೆಳಗಟ್ಟಿ, ಆರ್.ಕೆ. ಮೋರಗೇರಿ, ಎಸ್.ಎಂ. ಮುದ್ಲಾಪುರ, ಹನುಮಂತ ಮೇಟಿ, ಎಂ.ಎ. ಮಕಾಂದಾರ, ಈರಯ್ಯ ಲಕ್ಷ್ಮೇಶ್ವರಮಠ, ಮಾರುತಿ ಬೇವಿನಕಟ್ಟಿ, ಯಲ್ಲನಗೌಡ ಪಾಟೀಲ, ಕುರುವತ್ತೆಪ್ಪ ವಾಲಿಕಾರ, ರಮೇಶ ಕೆಲೂರ, ಹನುಮಂತಪ್ಪ ಕಲಿವಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts