More

    ಧನಗೂರಿನಲ್ಲಿ ಮದ್ದೂರಮ್ಮನ ಹಬ್ಬ ವೈಭವ

    ಮಳವಳ್ಳಿ: ತಾಲೂಕಿನ ಧನಗೂರು ಗ್ರಾಮ ದೇವತೆ ಮದ್ದೂರಮ್ಮನ ಹಬ್ಬವನ್ನು ಎರಡು ದಿನಗಳ ಕಾಲ ಗ್ರಾಮಸ್ಥರೂ ಸೇರಿದಂತೆ ಸುತ್ತಲಿನ ಊರಿನ ಜನರು ಸಡಗರ ಸಂಭ್ರಮದಿಂದ ಆಚರಿಸಿದರು.
    ಮಂಗಳವಾರ ಗ್ರಾಮ ಹೊರವಲಯದಲ್ಲಿ ಷಡಕ್ಷರದೇವ ಮಠಕ್ಕೆ ಗ್ರಾಮದ ಯಜಮಾನರ ನೇತೃತ್ವದಲ್ಲಿ ಮಹಿಳೆಯರು ತೆರಳಿ ಹೋಮ ಪಡೆದು ಹೂವಿನ ಆರತಿ ಹೊತ್ತು ಮದ್ದೂರಮ್ಮ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಕೊಡುವ ಮೂಲಕ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ನಂತರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆಂಪಯ್ಯ ರಾತ್ರಿಪೂರ್ತಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬುಧವಾರ ಹನುಮಂತರಾಯನ ದೇವಸ್ಥಾನದ ಬಳಿಯಿಂದ ನೀರು ತುಂಬಿದ ಗಡಿಗೆಯಲ್ಲಿ ಖೇಲು ಹೊತ್ತ ಪೂಜಾರಿಯನ್ನು ಮೆರವಣಿ ಮೂಲಕ ಕರೆತಂದು ಮದ್ದೂರಮ್ಮನಿಗೆ ಮಜ್ಜನ ಪೂಜೆ ಸಲ್ಲಿಸಿ ಅಭಿಷೇಕ ಮಾಡಲಾಯಿತು.
    ರಾತ್ರಿ ಮದ್ದೂರಮ್ಮನ ಉತ್ಸವ ಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತಮಟೆ, ನಗಾರಿ, ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಮೇಳೈಸಿದವು. ಮನೆ-ಮನೆಗಳಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts