More

    ದ.ಕ ಜಿಲ್ಲೆ ಸಂಜೆ 5ರವರೆಗೆ ಓಪನ್, ವಾರಾಂತ್ಯ ಕರ್ಫ್ಯೂನಲ್ಲೂ ಬಸ್ ಸಂಚಾರ, ದಿನಸಿಗೆ ಅನುಮತಿ

    ಮಂಗಳೂರು; ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯನ್ನು ಕೆಟಗರಿ-1ಕ್ಕೆ ಸೇರಿಸಲಾಗಿದ್ದು, ಜು.2ರಿಂದಲೇ ಲಾಕ್‌ಡೌನ್ ಸಡಿಲಿಕೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.

    ಆದರೆ, ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜು.5ರವರೆಗೂ ಮುಂದುವರೆಯಲಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಅಂಗಡಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ಬದಲು ಸಂಜೆ 5ರ ವರೆಗೂ ಕಾರ್ಯಾಚರಿಸಬಹುದು. ರಾತ್ರಿ 7ರಿಂದ ಬೆಳಗ್ಗೆ 5ರ ತನಕ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವಾರಾಂತ್ಯ ಕರ್ಫ್ಯೂ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

    ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳನ್ನು ರಾಜ್ಯದಲ್ಲಿ ಕೆಟಗರಿ-1ಕ್ಕೆ ಸೇರಿಸಿದೆ. ಈ ಮೊದಲು ದ.ಕ ಜಿಲ್ಲೆ ಅಧಿಕ ಪಾಸಿಟಿವಿಟಿ ದರ ಹೊಂದಿದ್ದು ಪ್ರಸ್ತುತ 5ಕ್ಕಿಂತ ಕೆಳಗೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಗೂ ರಿಯಾಯಿತಿ ನೀಡಬೇಕು ಎಂದು ಜಿಲ್ಲಾಡಳಿತ ವಿನಂತಿ ಮಾಡಿದ ಮೇರೆಗೆ ಸರ್ಕಾರ ಈ ಪರಿಷ್ಕೃತ ಆದೇಶ ಹೊರಡಿಸಿದೆ.

    ವೀಕೆಂಡ್ ನಿರ್ಬಂಧ ಕೂಡ ಸಡಿಲ: ಈ ಬಾರಿ ವಾರಾಂತ್ಯ ಕರ್ಫ್ಯೂ ಇದ್ದರೂ ಅನೇಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ದಿನಸಿ, ತರಕಾರಿ, ಮೀನು, ಮಾಂಸ, ಹಣ್ಣು ಅಂಗಡಿಗಳು, ಪತ್ರಿಕೆ, ಹಾಲಿನ ಬೂತ್ ತೆರೆಯಲು ಅವಕಾಶವಿದೆ. ಹೋಟೆಲ್‌ಗಳಲ್ಲೂ ಪಾರ್ಸೆಲ್‌ಗೆ ಅವಕಾಶ ಮಾಡಿಕೊಡಲಾಗಿದೆ. ವಾರಾಂತ್ಯ ಕರ್ಫ್ಯೂ ಇದ್ದರೂ ಬಸ್ ಸಂಚಾರಕ್ಕೆ ಅಡ್ಡಿ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts