More

    ದ್ರೌಪದಿ ಮುಮುಗೆ ಬಹುತೇಕ ಸಂಸದರ ಬೆಂಬಲ

    ಚಿಕ್ಕಮಗಳೂರು: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುಮು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಆಜಾದ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಸಂಘಟನಾ ಕಾರ್ಯದರ್ಶಿ ಸೀತಾರಾಂ ಭರಣ್ಯ ಮಾತನಾಡಿ, ಈ ದೇಶದ ಮಣ್ಣಿನ ಮಕ್ಕಳ ಪರ ಎಂದು ಹೇಳಿಕೊಳ್ಳುತ್ತಿದ್ದವರು ಬುಡಕಟ್ಟು ಮಹಿಳೆ ದ್ರೌಪದಿ ಮುಮು ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವುದನ್ನು ಬಿಟ್ಟು ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಆದರೆ ದ್ರೌಪದಿ ಮುಮು ಅವರನ್ನು ದೇಶದ ಬಹುತೇಕ ಸಂಸದರು ಬೆಂಬಲಿಸಿದ್ದಾರೆ. ಮೊದಲ ಬಾರಿಗೆ ಶೇ.64ಕ್ಕಿಂತಲೂ ಹೆಚ್ಚು ಮತ ಪಡೆದು ಆಯ್ಕೆ ಆಗಿರುವುದು ನಮಗೆಲ್ಲರಿಗೂ ಹೆಮ್ಮೆ ವಿಚಾರ ಎಂದರು.

    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಸಾಮಾನ್ಯ ಕುಟುಂಬದವರು ಸಹ ದೇಶದ ಪ್ರಥಮ ಪ್ರಜೆಯಾಗಬಹುದು ಎಂಬುದಕ್ಕೆ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುಮು ಅವರೇ ಸಾಕ್ಷಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿರುವ ನನ್ನಂತ ಕಾರ್ಯಕರ್ತರಿಗೂ ನಗರಸಭೆ ಅಧ್ಯಕ್ಷ ಸ್ಥಾನ ನೀಡಿರುವುದು ಪಕ್ಷದ ವಿಭಿನ್ನ ನಡೆಗೆ ಉದಾಹರಣೆ ಎಂದು ಹೇಳಿದರು.

    ರಾಜ್ಯ ಪ್ರಕೋಷ್ಠಗಳ ಸದಸ್ಯ ಬಿ.ರಾಜಪ್ಪ ಮಾತನಾಡಿ, ಸಾಮಾನ್ಯ ವ್ಯಕ್ತಿ ಇಂದು ದೇಶದ ರಾಷ್ಟ್ರಪತಿ ಆಗಿರುವುದು ಹೆಮ್ಮೆಯ ಸಂಗತಿ. ಎನ್​ಡಿಎ ಸರ್ಕಾರ ಬುಡಕಟ್ಟು ಮಹಿಳೆಯನ್ನು ಗುರುತಿಸಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts