More

    ದೊಡ್ಡವರ ಕಣ್ಸೆಳೆದ ಮಕ್ಕಳ ಸಂತೆ, ಬೇಸಿಗೆ ಶಿಬಿರದ ಚಿಣ್ಣರಿಂದ ವ್ಯಾಪಾರದ ಸಂಭ್ರಮ 

    ದಾವಣಗೆರೆ: ಇಲ್ಲಿ ಬನ್ನಿ ಸಾರ್ ಥಂಡಾ ಥಂಡಾ ಮಜ್ಜಿಗೆ ಕೇವಲ ಐದ್ರುಪಾಯಿ ಮಾತ್ರ. ನರ್ಗಿಸ್ ಮಂಡಕ್ಕಿ ಟೆನ್ ರುಪೀಸ್, ಇಲ್ನೋಡಿ ಸಾರ್ ಎಳೆಯ ಸೌತೆಕಾಯಿ ಸಿಗುತ್ತೆ…ಮ್ಯಾಂಗೋ, ವಾಟರ್‌ಮಿಲನ್ ಬೇಕಾ..
    ನಗರದ ಅನುಭವಮಂಟಪ ಶಾಲೆ ಹೊರಾವರಣದಲ್ಲಿ ಶನಿವಾರ ಕಂಡುಬಂದ ಮಕ್ಕಳ ಸಂತೆಯ ಚಿತ್ರಣವಿದು.
    ಅನ್ವೇಷಕರು ಆರ್ಟ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದ ವತಿಯಿಂದ ಆಯೋಜಿಸಿದ್ದ ವಿಶೇಷ ಸಂತೆಯಲ್ಲಿ 30 ಮಕ್ಕಳು ವ್ಯಾಪಾರ ವಹಿವಾಟಿನ ರುಚಿ ಅನುಭವಿಸಿದರು.
    ಚುರುಮುರಿ, ತೆಂಗಿನಕಾಯಿ, ಬಾಳೆಹಣ್ಣು, ಬನಾಸ್ಪತ್ರೆ, ಗಿರ್ಮಿಟ್, ಸೊಪ್ಪು, ತರಕಾರಿ, ಶರಬತ್ತು, ಸ್ವೀಟ್‌ಕಾರ್ನ್ ಅಲ್ಲದೆ ಲೇಖನಿ ಸಾಮಗ್ರಿ ಇತ್ಯಾದಿಗಳನ್ನು ಮಕ್ಕಳು ಮಾರಾಟ ಮಾಡಿದರು. ಸಂತೆಯಲ್ಲಿ ವ್ಯಾಪಾರಿಗಳು ನಡೆಸುವಷ್ಟೆ ಪೈಪೋಟಿಯಲ್ಲೇ ಥರಹೇವಾರಿ ಕೂಗು ಹಾಕಿದರು. ಪಾಲಕರು ಜತೆಯಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದರು.
    ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಸವಾರರು, ನಾಗರಿಕರು ಸಂತೆಯನ್ನು ನೋಡಿ ಖುಷಿ ಪಟ್ಟರು. ಕೆಲವರು ಸಾಮಗ್ರಿ ಖರೀದಿಸಿ ಮಕ್ಕಳ ಬೆನ್ನು ತಟ್ಟಿದರು. ಸಾಹಿತಿ ಡಾ.ಎಂ.ಜಿ.ಈಶ್ವರಪ್ಪ, ಬಾ.ಮಾ. ಬಸವರಾಜಯ್ಯ ಕೂಡ ಕುತೂಹಲಕ್ಕೆ ಭೇಟಿ ನೀಡಿ ಮಕ್ಕಳನ್ನು ಪ್ರಶ್ನಿಸಿದರು.
    ಈಗಿನ ಮೊಬೈಲ್ ಕಾಲದಲ್ಲಿ ಮಕ್ಕಳು ವಸ್ತುಗಳನ್ನು ಮಾರುವುದಕ್ಕಿಂತಲೂ ಅವರಲ್ಲಿ ಪ್ರಾಯೋಗಿಕ ಕಲಿಕೆ ಮಟ್ಟ ಹೆಚ್ಚಿಸಬೇಕಿದೆ. ಮಕ್ಕಳಲ್ಲಿ ವಾಕ್ ಚಾತುರ್ಯ, ಹಣಕಾಸು ವ್ಯವಹಾರದ ಗ್ರಹಿಕೆ, ವ್ಯಾಪಾರದ ಕೌಶಲ ತಿಳಿದುಬರಲು ಈ ಸಂತೆ ಆಯೋಜಿಸಲಾಗಿದೆ ಎಂದು ಸಂಘಟಕ ಎಸ್.ಎಸ್.ಸಿದ್ದರಾಜು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts