More

    ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ: ಗೃಹ ಸಚಿವ ಆರಗ ಜ್ಞಾನೇಂದ್ರ

    ಹೊಸನಗರ: ಇಂದು ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ಉಂಟಾಗುತ್ತಿದೆ. ವಿದ್ಯಾರ್ಥಿ ದಿಸೆಯಿಂದಲೇ ಸಂಸ್ಕಾರದ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಭಾರತದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.
    ವೀರ ಸಾವರ್ಕರ್ ವಿಚಾರದಲ್ಲಿ ಇಲ್ಲಸಲ್ಲದ ಟೀಕೆ ಮಾಡುತ್ತ ಅವರ ದೇಶಭಕ್ತಿ, ತ್ಯಾಗವನ್ನು ಮರೆಮಾಚಲಾಗುತ್ತಿದೆ. ಇಂದಿನ ಮಕ್ಕಳು ದೇಶಕ್ಕಾಗಿ ದುಡಿದ ಎಲ್ಲಾ ಮಹನೀಯರ ಆದರ್ಶ, ಬದುಕನ್ನು ಅರಿಯಬೇಕಿದೆ. ಸಾವರ್ಕರ್ ವಿಚಾರಧಾರೆಯನ್ನು ಮಕ್ಕಳಿಗೆ ಹಂಚುವ ಅಗತ್ಯವಿದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಪುರಾಣ ಕಾಲದಿಂದಲೂ ಅತ್ಯುನ್ನತ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಮಕ್ಕಳು ಯಾರ ಮಾತನ್ನು ಧಿಕ್ಕರಿಸಿದರು ಕೂಡ ಗುರುಗಳ ಮಾತನ್ನು ತಿರಸ್ಕರಿಸುವುದಿಲ್ಲ. ಭಾವಿ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದರು.
    ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲಾ ವಿಭಾಗದ ವಸಂತಕುಮಾರ್ ಮಾಸ್ತಿಕಟ್ಟೆ, ಶಿವಕುಮಾರ್ ಸುತ್ತಾ, ರಮೇಶ ಬರುವೆ, ಶಿವಪ್ಪ ಬಿಳ್ಳೋಡಿ, ಭವಾನಿ ಭಟ್ ಯಡೇಹಳ್ಳಿ, ಹರೀಶ್ ಎಂ.ಎನ್.ಬ್ರಹ್ಮೇಶ್ವರ, ಸುಜಾತಾ ಮಧುಗನ್ ಕೆಂಚನಾಲ, ಮಂಜುಳಾ ದೋಬೈಲ್, ಅನಿತಾ ಎಂ.ಎನ್. ಹಿರೇಜೇನಿ, ದೇವರಾಜ ನಿವಣೆ, ಅಂಬಿಕಾ ಸಮಟಗಾರು, ಸತೀಶ್ ಅಡಗೋಡಿ, ಶೀಲಾವತಿ ಭಟ್ ಕರಿಮನೆ, ಮಂಜುನಾಥ ಕಲ್ಲುವಿಡಿ ಅಬ್ಬಿಗಲ್ಲು ಇವರನ್ನು ಸನ್ಮಾನಿಸಲಾಯಿತು.
    ಪ್ರೌಢಶಾಲಾ ವಿಭಾಗದಲ್ಲಿ ಎಚ್.ಚಂದ್ರಶೇಖರ್, ಪ್ರಕಾಶ ಎಚ್.ಕೆ. ಕೋಡೂರು, ವೆಂಕಟೇಶ ಜಿ. ವೈದ್ಯ ನಗರ, ರವಿಕುಮಾರ್ ಅರಸಾಳು, ವಿನಹ ಹೆಗ್ಡೆ ಜಯನಗರ, ಮಂಜುಳಾ ಯಡೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಪ್ರೌಢಶಾಲೆಗಳು ಮತ್ತು ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts