More

    ದೇಶದ ಪ್ರಗತಿಗೆ ತಂತ್ರಜ್ಞಾನ ಅಗತ್ಯ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಿವಕುಮಾರ್ ಅನಿಸಿಕೆ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶಿವಕುಮಾರ್ ತಿಳಿಸಿದರು.
    ನಗರದ ಸುಭಾಷ್‌ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ತಾಲೂಕು ಶಿಕ್ಷಣ ಇಲಾಖೆ ಹಾಗೂ ಎಬಿಬಿ ಕಂಪನಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.
    ಹೊಸ ಸಂಶೋಧನೆ, ಆವಿಷ್ಕಾರಗಳೆಲ್ಲವೂ ವಿಜ್ಞಾನದ ಬೆಳೆವಣಿಗೆಯಾಗಿವೆ. ವಿಜ್ಞಾನ ಬೆಳವಣಿಗೆಯಿಂದಲೇ ವಿಶ್ವದ ಅನೇಕ ರಾಷ್ಟ್ರಗಳು ಮುಂದುವರಿದ ದೇಶಗಳ ಪಟ್ಟಿಯಲ್ಲಿವೆ. ಇತ್ತೀಚಿಗಿನ ದಿನಗಳಲ್ಲಿ ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಬೆಳವಣಿಗೆ ಕಾಣುತ್ತಿರುವುದು ಸಂತಸದ ಸಂಗತಿ ಎಂದರು.
    ವಿದ್ಯಾರ್ಥಿಗಳು ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವ ಅಗತ್ಯವಿದೆ. ಹಿಂದಿನ ಹಾಗೂ ಈಗಿನ ಹೊಸ ಆವಿಷ್ಕಾರಗಳೆಲ್ಲವೂ ಹಲವು ಬಾರಿ ಪ್ರಯತ್ನದ ಫಲವೇ ಆಗಿವೆ. ಶಾಲಾ ಪಠ್ಯಗಳಲ್ಲಿನ ಪ್ರಯೋಗಾತ್ಮಕ ವಿಚಾರ ಇಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಸಂಶೋಧನಾಸಕ್ತಿ ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿನ ಸೃಜನಾತ್ಮಕತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ವಿಜ್ಞಾನ ದಿನಾಚರಣೆ ಆಯೋಜಿಸಿರುವುದು ಅರ್ಥ ಪೂರ್ಣವಾಗಿದೆ ಎಂದರು.
    ಎಬಿಬಿ ಕಂಪನಿಯ ಮಾನಸಂಪನ್ಮೂಲ ಅಧಿಕಾರಿಗಳ ಮುಖ್ಯಸ್ಥ ಎಂ.ಅಜಯ್ ಮಾತನಾಡಿ, ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಹೊಸ ಸಂಶೋಧನೆ ನಡೆಯುತ್ತಿದ್ದು, ವಿಶ್ವದ ಮುಂದುವರಿದ ರಾಷ್ಟ್ರಗಳನ್ನು ಬೆರಗಾಗಿಸುತ್ತಿವೆ. ಅದರಲ್ಲೂ ದೇಶದ ರಕ್ಷಣಾ ಕ್ಷೇತ್ರ, ಉಪಗ್ರಹ, ಬಾಹ್ಯಕಾಶ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳು ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯುತ್ತಿವೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕು. ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದರು.
    ಈ ಪ್ರಯುಕ್ತ ಶಾಲೆಯಲ್ಲಿ ತಾಲೂಕುಮಟ್ಟದ ರಸಪ್ರಶ್ನೆ ಸ್ಪರ್ಧೆ ಹಾಗೂ ಪೋಸ್ಟರ್ ರಚನೆ ಸ್ಪರ್ಧೆ ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
    ಶಿಕ್ಷಣ ೌಂಡೇಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್, ತರಬೇತಿ ವಿಭಾಗ ಮುಖ್ಯಸ್ಥೆ ರಂಜನಿ, ಆಡಳಿತಾಧಿಕಾರಿ ರಾಜಣ್ಣ, ತರಬೇತುದಾರ ಮಧು, ಶಾಲಾ ಮುಖ್ಯ ಶಿಕ್ಷಕ ಗಂಗಬೈಲಪ್ಪ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಾಜಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts