More

    ದೇಶದ ಉನ್ನತಿಗೆ ಶಿಕ್ಷಕ, ಕೃಷಿಕ, ರಕ್ಷಕ ಕಾರಣ

    ಶಿರಹಟ್ಟಿ: ಶಿಕ್ಷಕ, ಕೃಷಿಕ ಮತ್ತು ರಕ್ಷಕ ಇವರು ದೇಶದ ಉನ್ನತಿಗೆ ಕಾರಣರಾಗಬಲ್ಲರು ಎಂದು ಅಗಡಿ ಅಕ್ಕಿಮಠದ ಶ್ರೀಗುರುಲಿಂಗ ಮಹಾಸ್ವಾಮೀಜಿ ಹೇಳಿದರು.

    ಪಟ್ಟಣದ ಸಿ.ಸಿ. ನೂರಶೆಟ್ಟರ್ ವಿದ್ಯಾಪ್ರಸಾರ ಶಿಕ್ಷಣ ಸಂಸ್ಥೆಯ ಎಸ್.ಎಫ್.ಸಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 17ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಶಿಕ್ಷಕ, ಕೃಷಿಕ, ರಕ್ಷಕ ಸಮಾಜಕ್ಕೆ ಇವರ ಕೊಡುಗೆ ಅನನ್ಯ. ಶಿಕ್ಷಕ ವೃತ್ತಿ ಕೇವಲ ಹೊಟ್ಟೆಪಾಡಿನ ಉದ್ಯೋಗವಲ್ಲ. ವಿದ್ಯಾರ್ಜನೆಗೆ ಬರುವ ಮಕ್ಕಳ ಮನ ಮುಟ್ಟುವಂತೆ ಪಾಠ ಮಾಡಿ ಅವರಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಯುತ ಶಿಕ್ಷಣ ನೀಡಿದಾಗ ದೇಶದ ಸತ್ಪ್ರಜೆಗಳಾಗಬಲ್ಲರು. ಕೃಷಿಕ ನಿಷ್ಠೆಯಿಂದ ದುಡಿದು ನಾಡಿನ ಜನತೆಗೆ ಅನ್ನವಿಕ್ಕಿದಾಗ ಜನರು ಸುಖದಿಂದ ಬದುಕು ಸಾಗಿಸುತ್ತಾರೆ. ಆರಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ, ಮಾನವೀಯತೆಯ ಗುಣ ಮುಖ್ಯವಾಗಿದೆ ಎಂದರು. ಮೋಬೈಲ್ ದಾಸರಾಗಿರುವ ಮಕ್ಕಳ ಬಗ್ಗೆ ತಂದೆ-ತಾಯಂದಿರು ಎಚ್ಚರಿಕೆ ವಹಿಸದಿದ್ದರೆ ಘೊರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

    ಸಂಸ್ಥೆಯ ಸಂಸ್ಥಾಪಕ ಚಂದ್ರಕಾಂತ ನೂರಶೆಟ್ಟರ್ ಮಾತನಾಡಿ, ‘ನಮ್ಮ ತಂದೆಯ ಕನಸು ನನಸಾಗಿಲು ಶಿಕ್ಷಣ ಸಂಸ್ಥೆ ತೆರೆಯಲಾಗಿದೆ. 17 ವರ್ಷಗಳಿಂದ ನಡೆಸುತ್ತಿರುವ ಶಾಲೆ ಸುವರ್ಣಮಹೋತ್ಸವ ಕಾಣಲಿ. ಪಟ್ಟಣದ ಜನತೆಯ ಸಹಕಾರ ನಿರಂತರವಾಗಿರಲಿ’ ಎಂದರು.

    ಸಿಪಿಐ ಆರ್.ಎಚ್. ಕಟ್ಟಿಮನಿ ಮಾತನಾಡಿದರು. ಕಳೆದ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಪಡೆದು ಸಾಧನೆಗೈದ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ವಿಜಯಕುಮಾರ ಪಾಟೀಲ ಕುಲಕರ್ಣಿ, ಜಯಶ್ರೀ ನೂರಶೆಟ್ಟರ್, ಐ.ಸಿ. ನೂರಶೆಟ್ಟರ್, ಎಸ್.ಬಿ. ಮಹಾಜನಶೆಟ್ಟರ್, ಡಾ. ವಿ.ಎಂ. ಮಂಗಸೂಳಿ ಇತರರು ಇದ್ದರು. ಮುಖ್ಯೋಪಾಧ್ಯಾಯ ಸಂತೋಷಕುಮಾರ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ನಂದೀಶ ಸ್ವಾಗತಿಸಿದರು. ಆತಿಯಾ ಹೆಸರೂರ, ಪ್ರಿಯಾಂಕಾ ನವಲಿ ನಿರೂಪಿಸಿದರು. ಶಿಕ್ಷಕ ಏಕಾಂತ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts