More

    ದೇವಸ್ಥಾನ ಅಭಿವೃದ್ಧಿಗೆ ಶ್ರಮದಾನ

    ನಾಪೋಕ್ಲು: ಪುರಾತನ ಇತಿಹಾಸವಿರುವ ಬೆಟ್ಟಗೇರಿ ಭಗವತಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥ ರಿಂದ ಶ್ರಮದಾನ ಆಯೋಜಿಸಲಾಗಿತ್ತು.


    ದೇವಸ್ಥಾನದ ಪಾಳು ಬಿದ್ದ ಬಾವಿಯನ್ನು ಶುಚಿಗೊಳಿಸಿ, ಮೋಟಾರ್ ಅಳವಡಿಸಲಾ ಯಿತು. ಮಾತ್ರವಲ್ಲದೆ ಗ್ರಾಮಸ್ಥರಿಂದ ದಾನಿ ಗಳಿಂದ ಹಣ ಸಂಗ್ರಹಿಸಿ ಆರು ವಿದ್ಯುತ್ ಕಂಬಗಳು ಹಾಗೂ ಸಾಮಗ್ರಿಗಳನ್ನು ಖರೀದಿ ಮಾಡಿ, ಗುರುವಾರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಶ್ರಮದಾನದ ಮೂಲಕ ವಿದ್ಯುತ್ ಕಂಬಗಳನ್ನು ಅಳವಡಿಸಿ ದರು. ನಂತರ ಜೆಸಿಬಿ ಯಂತ್ರದ ಮೂಲಕ ದೇವಸ್ಥಾನದ ಆವರಣವನ್ನು ವಿಸ್ತರಿಸಲಾಯಿತು.


    ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣ ದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದು, ದುರ್ಗಮ ಹಾದಿಯಲ್ಲಿ ಬೆಟ್ಟದ ಮೇಲಿರುವ ದೇವಸ್ಥಾನವನ್ನು ತಲುಪುವುದು ಕಷ್ಟ ಸಾಧ್ಯವಾಗಿತ್ತು. ಸರ್ಕಾರದ ಅನುದಾನದಲ್ಲಿ ಕೇವಲ ಅರ್ಧ ಕಿಲೋಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿತ್ತು. ಆದರೆ ಇದೀಗ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ತಾಲೂಕು ಪಂಚಾಯಿತಿ ಅನುದಾನದಲ್ಲಿ 5 ಲಕ್ಷ ರೂ. ಕಾಂಕ್ರೀಟ್ ರಸ್ತೆಗಾಗಿ ಬಿಡುಗಡೆಯಾಗಿದೆ.


    ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪೌಡಂಡ ಡಾಲಿ ಭೀಮಯ್ಯ ಉಪಾಧ್ಯಕ್ಷ ಕಟ್ಟ್ರತಂಡ ವಿಜಯ ಚಿಣ್ಣಪ್ಪ, ಕಾರ್ಯದರ್ಶಿ ಚಳಿಯಂಡ ಕಟ್ಟಿ, ಖಜಾಂಚಿ ಚಳಿಯಂಡ ಪುಟ್ಟ ಯತೀಶ್, ಗೌರವ ಸಲಹೆಗಾರ ನೆಯ್ಯಣಿರ ಹೇಮಕುಮಾರ್, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts