More

    ದೂರದೃಷ್ಟಿಯ ಮಹಾನಾಯಕ ರಾಮಕೃಷ್ಣ ಹೆಗಡೆ

    ಸಿದ್ದಾಪುರ: ವಿಕೇಂದ್ರಿಕರಣ ವ್ಯವಸ್ಥೆಯ ಮೂಲಕ ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಸಾರ್ಥಕ ಮಾಡುವ ಕನಸು ಕಂಡಿದ್ದವರು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ಎಂದು ದಾಂಡೇಲಿಯ ಬಂಗೂರುನಗರ ಪದವಿ ಕಾಲೇಜ್​ನ ಪ್ರಾಚಾರ್ಯ ಡಾ. ಆರ್.ಜಿ. ಹೆಗಡೆ ಹೇಳಿದರು.

    ರಾಮಕೃಷ್ಣ ಹೆಗಡೆ ಅವರ 97ನೇ ಜನ್ಮದಿನದ ಅಂಗವಾಗಿ ಇಲ್ಲಿನ ಎಂಜಿಸಿ ಕಲಾ, ವಾಣಿಜ್ಯ ಕಾಲೇಜ್​ನಲ್ಲಿ ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆ ಯಿಂದ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ಹೆಗಡೆ ದೃಷ್ಟಿಕೋನದಲ್ಲಿ ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರ-ರಾಜ್ಯಗಳ ಸಂಬಂಧಗಳು ವರ್ತಮಾನ ಮತ್ತು ಭವಿತವ್ಯದಲ್ಲಿ ಇದರ ಪ್ರಸ್ತುತತೆ’ ವಿಷಯ ಕುರಿತು ಅವರು ಮಾತನಾಡಿದರು. ಹೆಗಡೆ ಅವರು ರಾಜ್ಯಗಳಿಗೆ ಆಡಳಿತದ ಶಕ್ತಿ ಬರಬೇಕು ಎಂದು ವಾದಿಸಿ ಆ ಕುರಿತು ಸ್ಪಷ್ಟವಾದ ರೂಪುರೇಷೆ ಸಿದ್ಧಪಡಿಸಿದ್ದರು ಎಂದರು.

    ಹೆಗಡೆ ಅವರು ಕೇವಲ ರಾಜಕಾರಣಿಯಾಗಿರದೇ ದೂರದೃಷ್ಟಿ, ದಿವ್ಯ ದೃಷ್ಟಿಗಳನ್ನು ಹೊಂದಿದ್ದರು. ಜನಪರ ಯೋಜನೆಗಳ ಮೂಲಕ ಜನಮನ ತಲುಪಿದವರು. ಸಾಂಸ್ಕೃತಿಕ ಅಸ್ತಿತ್ವ ಉಳಿಸಿಕೊಳ್ಳಲು ಅವರ ವಿಚಾರಗಳು ಮಾದರಿಯಾಗಿವೆ ಎಂದರು.

    ಸಿದ್ದಾಪುರ ಜೆಎಂಎಪ್​ಸಿ ನ್ಯಾಯಾಧೀಶ ತಿಮ್ಮಯ್ಯ ಜಿ. ಅವರು ಮಾತನಾಡಿ, ದೇಶದ ಸಂವಿಧಾನ ಅತ್ಯಂತ ಶಕ್ತಿಶಾಲಿಯಾದದ್ದು. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಅರಿತುಕೊಳ್ಳಬೇಕು. ಮುತ್ಸದ್ಧಿ ರಾಮಕೃಷ್ಣ ಹೆಗಡೆಯವರ ವಿಚಾರಗಳ ಜತೆಗೆ ರಾಜ್ಯ-ಕೇಂದ್ರಗಳ ಅಧಿಕಾರದ ಕುರಿತು ಚಿಂತನೆ ನಡೆಯಬೇಕು ಎಂದರು.

    ವಕೀಲ ಆರ್.ಜಿ. ನಾಯ್ಕ ಕುಮಟಾ, ಉದ್ಯಮಿ ಬಸವರಾಜ ಓಶಿಮಠ ಉಪಸ್ಥಿತರಿದ್ದರು. ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮೇಧಿನಿ ಸಂಗಡಿಗರು ಪ್ರಾರ್ಥಿಸಿದರು. ಬಸವಲಿಂಗಪ್ಪ ಸ್ವಾಗತಿಸಿದರು. ಜಗನ್ನಾಥ ಮೊಗೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts