More

    ದುರಸ್ತಿ ನೆಪದಲ್ಲಿ ರಸ್ತೆ ಹಾಳು, ತುರ್ತು ಸೇವೆ ಒದಗಿಸಲು ಅಗ್ನಿಶಾಮಕದಳಕ್ಕೆ ಅಡ್ಡಿ, ದೂರು ನೀಡಿದರೂ ಸ್ಪಂದಿಸದ ಅಧಿಕಾರಿಗಳು

    ಹೊಸಕೋಟೆ: ನಗರದ ಅಗ್ನಿಶಾಮಕ ಠಾಣೆ ರಸ್ತೆಯನ್ನು ದುರಸ್ತಿ ಮಾಡುವ ನೆಪದಲ್ಲಿ 6 ತಿಂಗಳ ಹಿಂದೆ ಅಗೆಯಲಾಗಿದೆ. ಸೀಸನಿಂಗ್ ನೆಪದಲ್ಲಿ ಜಲ್ಲಿ ಕಲ್ಲು ಹಾಕಲಾಗಿದೆ. ಆದರೆ, ರಸ್ತೆಯನ್ನು ಸಮರ್ಪಕವಾಗಿ ನಿರ್ಮಿಸುವ ಕಾಮಗಾರಿ ಮಾತ್ರ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ತುರ್ತು ಸೇವೆ ಒದಗಿಸಲು ಅಗ್ನಿಶಾಮಕ ಸಿಬ್ಬಂದಿಗೆ ಭಾರಿ ತೊಂದರೆಯಾಗುತ್ತಿದೆ.

    ನಗರದಲ್ಲಿ ಹಾದು ಹೋಗಿರುವ ರಾ.ಹೆ.75 ರಿಂದ ಅಗ್ನಿಶಾಮಕ ಠಾಣೆವರೆಗೆ ರಸ್ತೆ ಇದ್ದು, ದುರಸ್ತಿಗೆಂದು ಅಗೆದು ಜಲ್ಲಿ ಕಲ್ಲು ಹಾಕಿರುವುದರಿಂದ, ತುರ್ತು ಸೇವೆ ಒದಗಿಸಲು ತೆರಳಬೇಕಾದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವಾಗ ನೀರು ತುಂಬಿದ ವಾಹನಗಳು ಪಂಚರ್ ಆಗಿ, ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.

    ಈ ರಸ್ತೆಯಲ್ಲಿ ಪೊಲೀಸ್ ವಸತಿಗೃಹಗಳ ಸಮುಚ್ಚಯ, ಅಗ್ನಿಶಾಮಕ ಸಿಬ್ಬಂದಿ ವಸತಿಗೃಹಗಳಿವೆ. ಈ ಸಿಬ್ಬಂದಿ ಕೆಲಸಗಳಿಗೆ ತೆರಳಲು ಹದಗೆಟ್ಟಿರುವ ರಸ್ತೆ ಭಾರಿ ಅಡ್ಡಿಯನ್ನುಂಟು ಮಾಡುತ್ತಿದೆ. ಈ ರಸ್ತೆಯನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಮನವಿ ಮಾಡಿಕೊಂಡರೆ ಯಾರೂ ಗಮನಹರಿಸುತ್ತಿಲ್ಲ ಎಂದು ಅಗ್ನಿಶಾಮಕದಳ ಠಾಣೆ ಸಿಬ್ಬಂದಿ ಮಂಜುನಾಥ್ ಆರೋಪಿಸಿದರು.

    ಈ ಭಾಗದಲ್ಲಿ ಒಳಚರಂಡಿ ಕಾಮಗಾರಿ ವ್ಯವಸ್ಥೆ ಇರಲಿಲ್ಲ. ಈಗ ಅದನ್ನು ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಬಳಿಕ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಇದಾದ ಬಳಿಕ ರಸ್ತೆ ದುರಸ್ತಿಗೊಳಿಸುವುದಾಗಿ ನಗರಸಭೆ ಆಯುಕ್ತ ರಮೇಶ್ ಭರವಸೆ ನೀಡಿದ್ದಾರೆ.
    ರಾಮೇಗೌಡ, ನಗರಸಭೆ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts