More

    ದಾವಣಗೆರೆ ಜಿಲ್ಲೆಯಲ್ಲಿ ಎಸ್ಸೆಸ್ಸ್ಸೆಲ್ಸಿ ಫಲಿತಾಂಶ ಕುಸಿತ, 14ನೇ ಸ್ಥಾನಕ್ಕಿಳಿದ ವಿದ್ಯಾನಗರಿ

    ದಾವಣಗೆರೆ: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಜಿಲ್ಲೆ ಶೇಕಡವಾರು 90.12 ಫಲಿತಾಂಶದೊಂದಿಗೆ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ 14ನೇ ಸ್ಥಾನ ಪಡೆದಿದೆ.

    ಕಳೆದ ಬಾರಿ ಶೇ.92.55 ಫಲಿತಾಂಶದೊಂದಿಗೆ 10ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ ನಾಲ್ಕು ಸ್ಥಾನ ಕುಸಿತ ಕಂಡಿದೆ. ಕಳೆದ ಬಾರಿಗಿಂತ ಶೇ.2.43ರಷ್ಟು ಫಲಿತಾಂಶ ಇಳಿಮುಖವಾಗಿದೆ.
    ಪರೀಕ್ಷೆಗೆ ಕೂತಿದ್ದ 20337 ವಿದ್ಯಾರ್ಥಿಗಳಲ್ಲಿ 18327 ಮಂದಿ ತೇರ್ಗಡೆಯಾಗಿದ್ದಾರೆ. 10492 ಬಾಲಕಿಯರ ಪೈಕಿ 9675 ಬಾಲೆಯರು (ಶೇ.92.21)ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ. 9845 ಬಾಲಕರ ಪೈಕಿ 8652 ಬಾಲಕರು (ಶೇ. 87.88) ಪಾಸಾಗಿದ್ದಾರೆ.
    63 ವಿದ್ಯಾರ್ಥಿಗಳು ಶೇ.98ರಷ್ಟು ಅಂಕ ಗಳಿಸಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ 392 ವಿದ್ಯಾರ್ಥಿಗಳು ಪೂರ್ಣ 125 ಅಂಕ ಪಡೆದು ಗಮನ ಸೆಳೆದಿದ್ದಾರೆ. *ಜಗಳೂರು ಫಸ್ಟ್, ಹೊನ್ನಾಳಿ ಲಾಸ್ಟ್
    ವಲಯವಾರು ಪ್ರಗತಿ ಗಮನಿಸಿದರೆ ಜಗಳೂರು ಪ್ರತಿಶತ 96.48 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಇಲ್ಲಿ ಪರೀಕ್ಷೆ ಎದುರಿಸಿದ 2242 ವಿದ್ಯಾರ್ಥಿಗಳಲ್ಲಿ 2163 ಮಂದಿ ತೇರ್ಗಡೆಯಾಗಿದ್ದಾರೆ. ಹೊನ್ನಾಳಿ 80.58 ಫಲಿತಾಂಶದೊಂದಿಗೆ ಆರನೇ ಸ್ಥಾನಕ್ಕೆ ಇಳಿದಿದೆ. ಇಲ್ಲಿ 2734 ಅಭ್ಯರ್ಥಿಗಳಲ್ಲಿ ಪಾಸಾದವರು 2203 ಮಂದಿ ಮಾತ್ರ.
    ದಾವಣಗೆರೆ ಉತ್ತರ ವಲಯದ 3411 ವಿದ್ಯಾರ್ಥಿಗಳಲ್ಲಿ 3167 (92.85), ತೇರ್ಗಡೆಯಾಗಿದ್ದು ಎರಡನೇ ಸ್ಥಾನ ಪಡೆದರೆ, ಚನ್ನಗಿರಿಯಲ್ಲಿ 3655ರಲ್ಲಿ 3380 ವಿದ್ಯಾರ್ಥಿಗಳು (92.48) ಪಾಸಾಗಿದ್ದು ತೃತೀಯ ಸ್ಥಾನ ಪಡೆದಿದೆ.
    ಹರಿಹರದಲ್ಲಿ 3006ರಲ್ಲಿ 2709 ವಿದ್ಯಾರ್ಥಿಗಳು (90.12) ತೇರ್ಗಡೆಯಾಗಿ ನಾಲ್ಕನೇ ಸ್ಥಾನ ಗಳಿಸಿದರೆ, ದಾವಣಗೆರೆ ದಕ್ಷಿಣ ವಲಯ 5289ರಲ್ಲಿ 4705 ಅಭ್ಯರ್ಥಿಗಳು ಪಾಸಾಗುವುದ (88.96)ರೊಂದಿಗೆ ಐದನೇ ಸ್ಥಾನದಲ್ಲಿದೆ.

    *127 ಶಾಲೆಗಳ ಸೆಂಚುರಿ
    127 ಶಾಲೆಗಳು ಪೂರ್ಣ ಶೇ.ನೂರರಷ್ಟು ಫಲಿತಾಂಶ ಪಡೆದಿವೆ. ಈ ಪೈಕಿ ಸರ್ಕಾರಿ ಶಾಲೆಗಳು 50, ಅನುದಾನಿತ 26, ಅನುದಾನರಹಿತ 51 ಶಾಲೆಗಳಿವೆ.
    ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಹಳ್ಳಿ ಮಹದೇವಪ್ಪ ಶಾಲೆ, ಸುಂದರಮ್ಮ ಶಾಲೆ, ಡಾ.ಬಿ.ಎಂ.ತಿಪ್ಪೇಸ್ವಾಮಿ ಸ್ಮಾರಕ ಶಾಲೆ, ಎಸ್ಸಿ-ಎಸ್ಟಿ ವಸತಿ ಶಾಲೆ, ಹೊನ್ನಾಳಿ ತಾಲೂಕು ಬೆಳಗುತ್ತಿಯ ಎಸ್‌ಟಿಎಲ್ ನ್ಯಾಷನಲ್ ಶಾಲೆ ಸೇರಿ ಐದು ಅನುದಾನಿತ ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿವೆ.

    * ಆರು ಮಂದಿ ಟಾಪರ್‌ಗಳು
    ಸಿದ್ಧಗಂಗಾ ಶಾಲೆಯ ಆರ್. ಚೇತನಾ 624 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎ.ಆರ್.ಮಂಜುನಾಥ ಎಂ.ಬಿ.ಶ್ವೇತಾ ದಂಪತಿಯ ಪುತ್ರಿ, ಅನುಭವಮಂಟಪ ಶಾಲೆಯ ಎ.ಎಂ. ಚಿನ್ಮಯಿ ಹಾಗೂ ಜಗಳೂರಿನ ಜೆ.ಎಂ. ಇಮಾಂ ಸ್ಮಾರಕ ಶಾಲೆಯ ಎಂ. ಅನನ್ಯಾ (ಜೆ.ಮಂಜುನಾಥ, ಎಸ್,.ಡಿ. ಸವಿತಾ ಪಾಲಕರು)ಇಬ್ಬರೂ 621 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
    619 ಅಂಕ ಪಡೆದ ಮೂವರು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಬಸವರಾಜ್ ಮುತ್ತಗಿ-ಶಾರದಾ ದಂಪತಿಯ ಪುತ್ರಿ ಹಾಗೂ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಬಸವರಾಜ್ ಮುತ್ತಗಿ, ಶಂಷೀರ್ ಅಹ್ಮದ್-ಫರೀದುನ್ನೀಸಾ ಖಾನುಂ ದಂಪತಿಯ ಪುತ್ರಿ ಹಾಗೂ ಜಗಳೂರಿನ ಆರ್‌ವಿಎಸ್ ವಿದ್ಯಾಪೀಠದ ವಿದ್ಯಾರ್ಥಿನಿ ಜೆ.ಎಸ್.ತಹಮಿನಾ ಖಾತೂನ್ ಎಸ್.ಹನುಮಂತಗೌಡ-ಎಸ್.ಗೀತಾ ದಂಪತಿಯ ಪುತ್ರಿ, ಜಗಳೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಎಸ್.ಸ್ನೇಹಾ ಮೂರನೇ ಸ್ಥಾನ ಪಡೆದಿದ್ದಾರೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts