More

    ದಾನಮ್ಮಳ ಆದರ್ಶಪಥ ಇಂದಿಗೂ ಜೀವಂತ

    ಬೆಳಗಾವಿ: ದಾನ-ದಾಸೋಹದ ಸಿರಿಯಾಗಿ ಬೆಳಗಿದ ದಾನಮ್ಮಳ ಆದರ್ಶಪಥ ಇಂದಿಗೂ ಜೀವಂತವಾಗಿ ಉಳಿದಿದೆ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಇತ್ತೀಚೆಗೆ ಜರುಗಿದ ಶಹಾಪುರದ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ 38ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದ ಮಹಾಶರಣೆ ದಾನಮ್ಮ ದೀನ-ದಲಿತರ, ನಿರ್ಗತಿಕರ, ಅನಾಥರ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮೌಲಿಕವಾದ ಕೊಡುಗೆ ನೀಡಿದ್ದರು ಎಂದು ನೆನಪಿಸಿಕೊಂಡರು. ತನ್ನ ರಚನಾತ್ಮಕವಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಿಂದ ಬೆಳಗಾವಿಯ ಶಹಾಪುರದ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ ಬಹುಮೌಲಿಕವಾದ ಸೇವೆಯನ್ನು ಸಲ್ಲಿಸುತ್ತಿದೆ. ಮಹಾ ಶರಣೆ ದಾನಮ್ಮಳ ಧ್ಯೇಯದಂತೆ ಬಡವರ ಅನಾಥರ ಸೇವೆ ಮಾಡುತ್ತಿದೆ. ದಾನಮ್ಮಳ ಆದರ್ಶಗಳು ಜನರಿಗೆ ಮುಟ್ಟಿಸುವ ಕೆಲಸ ನಿರಂತರವಾಗಿ ನಡೆಯಲಿ ಎಂದರು.

    ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಮಾತನಾಡಿ, ದೂರದ ಗುಡ್ಡಾಪುರಕ್ಕೆ ಸಮಾನಾಂತರವಾಗಿ ದಾನಮ್ಮದೇವಿ ಮಂದಿರವು ಇಲ್ಲಿ ರೂಪುಗೊಂಡಿದೆ. ಭಕ್ತರ ಆರಾಧ್ಯ ಕೇಂದ್ರವೆನಿಸಿದೆ. ಅದರೊಂದಿಗೆ ದಾನಮ್ಮದೇವಿಯ ಆದರ್ಶಪಥದಂತ ಹತ್ತು-ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ರಕ್ತದಾನ, ಆರೋಗ್ಯ ತಪಾಸಣೆ ಶಿಬಿರಗಳು, ಅಂಗವಿಕಲ, ಅನಾಥಾಶ್ರಮ, ವೃದ್ಧಾಶ್ರಮ, ಬುದ್ಧಿಮಾಂದ್ಯ, ಅಂಧ ಶಾಲಾ ಮಕ್ಕಳು ಮೊದಲ್ಗೊಂಡು ಹಲವಾರು ಕೇಂದ್ರಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಸಾಮಗ್ರಿ ಪ್ರತಿವರ್ಷ ವಿತರಿಸುತ್ತ ಬಂದಿದೆ ಎಂದರು. ಸುನೀತಾ ದೇಸಾಯಿ, ಗುರುಬಸಪ್ಪಣ್ಣ ಚೊಣ್ಣದ, ಅರುಣಾ ಬೆಂಬಳಗಿ, ವಿಜಯಲಕ್ಷ್ಮೀ ಉಮದಿ, ಅನಿಲ ಪಾಟೀಲ, ವಿ.ಸಿ.ಬೆಂಬಳಗಿ ವಿವೇಕ ಭೋಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts