More

    ದಸರಾ ಮಾದರಿಯಲ್ಲಿ ಕೆಂಪೇಗೌಡ ಜಯಂತೋತ್ಸ, ಪುತ್ತೂರಿನಲ್ಲಿ ನಡೆದ ಕೆಂಪೇಗೌಡರ 513ನೇ ಜಯಂತೋತ್ಸವದಲ್ಲಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್

    ಪುತ್ತೂರು: ನಾಡಪ್ರಭು ಕೆಂಪೇಗೌಡ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಅವರ ಅಭಿವೃದ್ಧಿ ಕಾರ್ಯ, ದೂರದೃಷ್ಟಿತ್ವದ ಚಿಂತನೆ ಸದಾ ಪ್ರೇರಣಾದಾಯಿ ಈ ನಿಟ್ಟಿನಲ್ಲಿ ಅವರ ಜಯಂತೋತ್ಸವವನ್ನು ದಸರಾ ಮಾದರಿಯಲ್ಲಿ ಆಚರಣೆ ಮಾಡಬೇಕೆಂಬ ಚಿಂತನೆ ಇದೆ ಎಂದು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್ ಹೇಳಿದರು.
    ರಾಜ್ಯ ಒಕ್ಕಲಿಗರ ಸಂಘದ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ತೆಂಕಿಲ ಒಕ್ಕಲಿ ಗೌಡ ಸಮುದಾಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ 513ನೇ ಜಯಂತೋತ್ಸವದಲ್ಲಿ ಅವರು ಸಂಸ್ಮರಣಾ ಜ್ಯೋತಿ ಬೆಳಗಿಸಿ ಮಾತನಾಡಿದರು.
    ನಮ್ಮ ಪರಂಪರೆ, ಸಂಸ್ಕಾರ, ಸಂಸ್ಕೃತಿಯನ್ನು ಮರೆಯಬಾರದು. ಇದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಕೆಂಪೇಗೌಡರ ಕುರಿತು ಮುಂದಿನ ಪೀಳಿಗೆ ಅರಿಯುವ ಕೆಲಸ ಆಗಬೇಕೆಂಬ ಆದೇಶವಿದೆ. ಇದರೆ ಜೊತೆಗೆ ಕೆಂಪೇಗೌಡರ ಜಯಂತೋತ್ಸವವನ್ನು ದಸರಾ ಮಾದರಿಯಲ್ಲಿ ಆಚರಿಸುವ ನಿರ್ಧಾರವಿದೆ. ನಮ್ಮ ಒಕ್ಕಲಿಗರಲ್ಲಿ ಯಾರೆಲ್ಲ ಹೆಸರು ಕೀರ್ತಿ ತಂದಿದ್ದಾರೋ ಅವರನ್ನೆಲ್ಲ ನೆನಪಿಸಿಕೊಳ್ಳಬೇಕು ಅದಕ್ಕಾಗಿ ಮಹಾಸಂಗಮ ಕಾರ್ಯಕ್ರಮ ರಾಜ್ಯ ಒಕ್ಕಲಿಗ ಸಂಘದ ನೇತೃತ್ವದಲ್ಲಿ ನಡೆಯಬೇಕೆಂಬ ಸೂಚನೆ ಇದೆ ಹಾಗಾಗಿ ಎಲ್ಲರ ಸಹಕಾರಕ್ಕೆ ಮನವಿ ಮಾಡಿದರು.
    ಇದೇ ಸಂದರ್ಭದಲ್ಲಿ ಡಾ.ಕೆ.ವಿ.ರೇಣುಕಾಪ್ರಸಾದ್ ಅವರನ್ನು ಪುತ್ತೂರು ಸಂಘದಿಂದ ಸನ್ಮಾನಿಸಲಾಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮಾಜಿ ಅಧ್ಯಕ್ಷ ಹೆಚ್.ಡಿ.ಶಿವರಾಮ ಗೌಡ, ನಾಗಪ್ಪ ಗೌಡ ಬೊಮ್ಮೆಟ್ಟಿ ಡಾ.ಕೆ.ವಿ.ರೇಣುಕಾಪ್ರಸಾದ್ ಅವರನ್ನು ಸನ್ಮಾನಿಸಿದರು.
    ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿದ್ದರು.
    ಪ್ರತಿಭಾ ಪುರಸ್ಕಾರ ಪ್ರಾಯೋಜಕರಾಗಿರುವ ನಿವೃತ್ತ ಪ್ರಾಧ್ಯಾಪಕಿ ಲೀಲಾವತಿ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ ಇದ್ದರು. ದಾಮೋದರ್ ಗೌಡ ನಂದಿಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಸ್ವಾಗತಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ವಂದಿಸಿದರು. ವಸಂತ ವೀರಮಂಗಲ ಮತ್ತು ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

    ಒಕ್ಕಲಿಗ ಸಂಘದ ಮೂಲಕ ಎಲ್ಲಾ ಜಿಲ್ಲೆಗೆ ಸಮಾಜದ ವಸತಿ ನಿಲಯ ನೀಡಲಾಗುತ್ತದೆ. ಈ ಭಾರಿ ಸುಳ್ಯಕ್ಕೆ ಅದು ಮಂಜೂರಾಗಿದೆ. ಮಂದೆ ಪುತ್ತೂರಿಗೂ ನೀಡಲಿದ್ದೇವೆ. ಒಕ್ಕಲಿಗರ ಪ್ರಾಧಿಕಾರದ ಮೂಲಕ ಅನೇಕ ಯೋಜನೆ ಇದೆ. ಅದನ್ನು ಉಪಯೋಗಿಸಿಕೊಳ್ಳಿ. ಕಟ್ಟಡಕ್ಕೂ ರೂ. 25ಲಕ್ಷ ಕೊಡಲು ನಿರ್ಧಾರ ಕೈಗೊಂಡಿದೆ. 500 ಮಂದಿಯ ವಸತಿ ನಿಲಯ ಕಟ್ಟಿದರೆ ರೂ. 1 ಕೋಟಿ ಅನುದಾನ ನೀಡಲಾಗುತ್ತದೆ. ಇದೆಲ್ಲ ನಮ್ಮ ದೊರೆ ನಾಡಪ್ರಭು ಕೆಂಪೇಗೌಡರ ಕೊಡುಗೆ. ಹಾಗಾಗಿ ನಮ್ಮ ಸಂಘಟನೆ ಇನ್ನಷ್ಟು ಭದ್ರ ಪಡಿಬೇಕು.
    ಡಾ. ರೇಣುಕಾಪ್ರಸಾದ್, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts