More

    ದಲಿತ ಸಿಎಂ, ಜಾರಕಿಹೊಳಿ ಪರ ವಾಲ್ಮೀಕಿ ಸ್ವಾಮೀಜಿ ಅಖಾಡಕ್ಕೆ !

    ಬಾಗಲಕೋಟೆ: ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಅಧಿಕಾರ ಗದ್ದುಗೆ ಹಿಡಿದ ದಿನದಿಂದಲೇ ಸಿಎಂ ಕುರ್ಚಿ ಎಷ್ಟು ದಿನ ಎನ್ನುವ ಚರ್ಚೆ ವ್ಯಾಪಕವಾಗಿದೆ. ಇದಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಆದರೆ, ನಾನೇ ಐದು ವರ್ಷ ಸಿಎಂ ಎಂದು ಸ್ವತಃ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅದು ಮತ್ತಷ್ಟು ಚರ್ಚಿತ ವಿಷಯವಾಗಿದೆ. ಇದೀಗ ದಲಿತ ಸಿಎಂ ಯಾರಾಗಬೇಕು ಎಂದು ಸ್ವತಃ ಸ್ವಾಮೀಜಿ ಒಬ್ಬರು ಅಖಾಡಕ್ಕೆ ಇಳಿದಿದ್ದಾರೆ.

    ಹೌದು, ಭಾನುವಾರ ಬಾಗಲಕೋಟೆ ಕಲಾಭವನದಲ್ಲಿ ನಡೆದ ವಾಲ್ಮೀಕಿ ಸಮಾಜದ ನೂತನ ಶಾಸಕ, ಸಚಿವರಿಗೆ ಸನ್ಮಾನ ಸಮಾರಂಭ ಹಾಗೂ ಜನಜÁಗೃತಿ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು. ರಾಜ್ಯದಲ್ಲಿ ದಲಿತ ಸಿಎಂ ಯಾಕಾಗಾಬಾರದು ಎಂದು ನೇರವಾಗಿ ಪ್ರಶ್ನೆ ಮಾಡಿದ್ದಲ್ಲದೇ ಸಿದ್ದು ಬಳಿಕ ಸಚಿವ ಸತೀಶ್ಜಾರಕಿಹೊಳಿ ಸಿಎಂ ಆಗಬೇಕು. ಅದಕ್ಕೆ ನಾವೆಲ್ಲ ಗಟ್ಟಿಯಾಗಿ ನಿಲ್ಲಬೇಕು ಎಂದು ನೇರವಾಗಿಯೇ ಕರೆ ನೀಡಿದ್ದಾರೆ.

    ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದೇನು…?
    ಇತ್ತೀಚಿಗೆ ಸಚಿವ ರಾಜಣ್ಣ ಅವರು ಸಿದ್ದರಾಮಯ್ಯ ಬಳಿಕ ದಲಿತ ನಾಯಕ ಡಾ.ಜಿ.ಪರಮೇಶ್ವರ ಸಿಎಂ ಆಗಬೇಕು ಎನ್ನುವ ಪ್ರಸ್ತಾಪ ಮಾಡಿದ್ದರು. ಇದೀಗ ಸ್ವಾಮೀಜಿ ಅವರು ರಾಜಣ್ಣ ಅವರಿಗೆ ತಿರುಗೇಟು ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಏನಾದರೂ ಬೆಳವಣಿಗೆ ನಡೆದು ಸಿಎಂ ಬದಲಾವಣೆ ಆದರೆ ಅದಕ್ಕೆ ಸತೀಶ್ಜಾರಕಿಹೊಳಿ ಸೂಕ್ತ ಎಂದು ಹೇಳಿದ್ದಾರೆ.

    ರಾಜಕಾರಣ ಎಂದು ಬಂದರೆ ನಾಡಿನ ದೊರೆಯಾಗುವ ಶಕ್ತಿ ಸತೀಶ್ಜಾರಕಿಹೊಳಿ ಅವರಿಗೆ ಇದೆ. ಇಡೀ ಸಮುದಾಯ ಅವರಿಗೆ ಬೆಂಬಲವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಕರೆ ನೀಡಿರುವ ಸ್ವಾಮೀಜಿ, ಮುಖ್ಯಮಂತ್ರಿ ಸ್ಥಾನ ಒಂದು ಸಮುದಾಯದ ಸ್ವತ್ತಾ? ಕೆಲವು ಸಮುದಾಯಗಳ ಗುತ್ತಿಗೆಯಾ? ದಲಿತರು ಸಿಎಂ ಆಗಲಿ ಎನ್ನುವ ಔದಾರ್ಯ ಹೊಂದಿರದಿದ್ದರೆ ಹೇಗೆ ಎಂದು ತಮ್ಮ ಸಮುದಾಯದ ಜಾರಕಿಹೊಳಿ ಪರವಾಗಿಯೇ ಭರ್ಜರಿ ಬ್ಯಾಟಿಂಗ್ ಆಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts