More

    ದಯಾಮರಣ ಕೋರಿ ನಿವೃತ್ತ ಸೈನಿಕನಿಂದ ಡಿಸಿಗೆ ಮನವಿ

    ಗದಗ: ಮನೆ ಮತ್ತು ಸೈನಿಕ ತರಬೇತಿ ಶಾಲೆ ಕಟ್ಟಡ ನಿರ್ವಣಕ್ಕೆ ಇಬ್ಬರು ವ್ಯಕ್ತಿಗಳು ನೀಡುತ್ತಿರುವ ಕಿರುಕುಳದಿಂದ ಬೇಸತ್ತು ನಿವೃತ್ತ ಸೈನಿಕ ಈರಣ್ಣ ಬಸವಣ್ಣೆಪ್ಪ ಅಣ್ಣಿಗೇರಿ ಹಾಗೂ ಅವರ ಕುಟುಂಬಸ್ಥರು ದಯಾಮರಣ ಕೋರಿ ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಲಕ್ಷೆ್ಮೕಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದ ಈರಣ್ಣ ಬಸವಣ್ಣೆಪ್ಪ ಅಣ್ಣಿಗೇರಿ ಅವರು ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ ಸೇವೆಯಲ್ಲಿದ್ದಾಗಲೇ ಎರಡು ನಿವೇಶನಗಳನ್ನು ಖರೀದಿಸಿದ್ದರು. ಆ ನಿವೇಶನದಲ್ಲಿ ಈಗ ಮನೆ, ಸೈನಿಕ ಶಾಲೆ ಕಟ್ಟಡ ಕಾಮಗಾರಿ ಆರಂಭಿಸಿದ್ದಾರೆ. ಇದಕ್ಕೆ ಲಕ್ಷ್ಮೇಶ್ವರ ನಿವಾಸಿಗಳಾದ ಗಂಗಾಧರ ಸೋಮಪ್ಪ ಗುಡಗೇರಿ ಮತ್ತು ಮಂಜುನಾಥ ವೀರಭದ್ರಪ್ಪ ಮಾಗಡಿ ಅವರು ಸಾರ್ವಜನಿಕರ ಹೆಸರಿನಲ್ಲಿ ಸುಳ್ಳು ಆರೋಪ ಮಾಡಿ, ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಿ ಕಾಮಗಾರಿ ತಡೆಯುತ್ತಿದ್ದಾರೆ. ಅಲ್ಲದೆ, ನನ್ನ ಮನೆಗೆ ಗೂಂಡಾಗಳನ್ನು ಕಳಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿಸುತ್ತಿದ್ದಾರೆ. ನನಗೆ, ತಾಯಿ, ಹೆಂಡತಿ, ಮಕ್ಕಳು, ಸಹೋದರನಿಗೆ ರಕ್ಷಣೆ ಕೊಡಬೇಕು. 10 ದಿನದೊಳಗೆ ಮನೆ ಕಟ್ಟಲು ಪರವಾನಗಿ ನೀಡಬೇಕು. ಇಲ್ಲವಾದರೆ ಕುಟುಂಬ ಸಮೇತ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಕವಿತಾ ಈರಣ್ಣ ಅಣ್ಣಿಗೇರಿ, ಶಿವಲಿಂಗಪ್ಪ ಅಣ್ಣಿಗೇರಿ, ಶೋಭಾ ಅಣ್ಣಿಗೇರಿ, ಪ್ರಕೃತಿ, ಪ್ರಣೀತ, ಶಿವಯೋಗೀಶ, ಆದಿತ್ಯಾ ಇದ್ದರು.

    ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ನಿವೃತ್ತ ಸೈನಿಕನ ಕುಟುಂಬದವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಪರಿಶೀಲಿಸಲಾಗುವುದು.

    | ಯತೀಶ ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts