More

    ತ್ರಿಪುರದಲ್ಲಿ ನಿಷ್ಪಕ್ಷಪಾತ ಚುನಾವಣೆಗೆ ಆಗ್ರಹಿಸಿ ಸಿಪಿಐ(ಎಂ) ಪ್ರತಿಭಟನೆ 

    ದಾವಣಗೆರೆ:ತ್ರಿಪುರದಲ್ಲಿ ನಿಷ್ಪಕ್ಷಪಾತ ವಿಧಾನಸಭೆ ಚುನಾವಣೆ ನಡೆಸಬೇಕು. ನಿರ್ಭಯ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ದಾವಣಗೆರೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
    ಎಡರಂಗದ ಆಡಳಿತದ ಅವಧಿಯಲ್ಲಿ ಜನರು ಸಂಭ್ರಮದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ಗೂಂಡಾಗಿರಿ, ಹಿಂಸಾಚಾರ ನಡೆಸಲಾಗಿತ್ತು. ಮತದಾರರನ್ನು ಭೇಟಿ ಮಾಡದಂತೆ ತಡೆಯಲಾಗಿತ್ತು. ಈ ಬಾರಿಯೂ ಭಯಭೀತ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಇದನ್ನು ತಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ಆನಂದರಾಜು, ತ್ರಿಪುರದಲ್ಲಿ ಈ ಹಿಂದಿದ್ದ ಎಡಪಕ್ಷಗಳ ನೇತೃತ್ವದ ಸರ್ಕಾರ ಜನಪರ ಆಡಳಿತಕ್ಕೆ ಹೆಸರಾಗಿತ್ತು. ಆದರೀಗ ಇದು ಬಿಜೆಪಿ-ಐಪಿಎಫ್ಟಿ ಆಡಳಿತದಲ್ಲಿ ಸಂಕಟದಲ್ಲಿ ಬೇಯುತ್ತಿದೆ. ಅರಾಜಕತೆ ತಾಂಡವಾಡುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಕುಸಿತ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಶೇ. 7ರಷ್ಟು ನಿರುದ್ಯೋಗದಲ್ಲಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಭರವಸೆಯಂತೆ ಉದ್ಯೋಗಗಳನ್ನು ಕಲ್ಪಿಸಿಲ್ಲ. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಜನಕಲ್ಯಾಣದ ಎಲ್ಲ ಯೋಜನೆಗಳಿಂದ ಅನುದಾನ ಕಡಿತ ಮಾಡಲಾಗಿದೆ. ಇದರ ನೇರ ಪರಿಣಾಮಕ್ಕೆ ತ್ರಿಪುರಾವೂ ಬಲಿಯಾಗಲಿದೆ ಎಂದರು.
    ಕಳೆದ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಅನಾಚಾರ ನಡೆಸಿ ಮತದಾರರ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡಿದ್ದಲ್ಲದೆ ಮನೆಯಿಂದ ಹೊರಬಾರದಂತೆ ಹಾಗೂ ಮತ ಹಾಕದಂತೆ ಭಯದ ವಾತಾವರಣ ಮೂಡಿಸಲಾಗಿತ್ತು. ಬಿಜೆಪಿ ಈಗ ಅದೇ ಗೂಂಡಾಗಿರಿ ಪ್ರಯೋಗಿಸಿ ಗೆಲುವು ಸಾಧಿಸಲು ಹೊರಟಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ಮಾಳಮ್ಮ, ರೇಣುಕಮ್ಮ, ಕಾರ್ಮಿಕ ಸಂಘಟನೆಯ ನೇತ್ರಾವತಿ, ಪರಶುರಾಂ, ಶೀನಿವಾಸಮೂರ್ತಿ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts